ಗಿನ್ನಿಸ್ ದಾಖಲೆ ನಿರ್ಮಿಸಿದ LIC: 24 ಗಂಟೆಯಲ್ಲಿ ಅತಿ ಹೆಚ್ಚು ಜೀವವಿಮಾ ಪಾಲಿಸಿ ನೋಂದಣಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರತೀಯ ಜೀವ ವಿಮಾ ನಿಗಮ (LIC) ದಿನದ 24 ಗಂಟೆಯಲ್ಲಿ ಅತಿ ಹೆಚ್ಚು ಜೀವವಿಮಾ ಪಾಲಿಸಿ ನೋಂದಣಿ ಮಾಡಿಸುವ ಮೂಲಕ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದೆ.

ಜ. 20ರಂದು ಒಂದೇ ದಿನದಲ್ಲಿ ನೋಂದಣಿಯಾದ ಪಾಲಿಸಿಗಳನ್ನು ಗಿನ್ನಿಸ್ ವಿಶ್ವ ದಾಖಲೆ ಪರಿಗಣಿಸಿದೆ ಎಂದು ಎಲ್‌ಐಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಜ. 20ರಂದು ಒಟ್ಟು 4,52,839 ಏಜೆಂಟರು 24 ಗಂಟೆಯೊಳಗೆ ದೇಶದಾದ್ಯಂತ 5,88,107 ಜೀವ ವಿಮೆಯನ್ನು ನೋಂದಾಯಿಸಿದ್ದಾರೆ. ಇದೊಂದು ವಿಶಿಷ್ಟ ಸಾಧನೆ ಎಂದು ಗಿನ್ನಿಸ್ ಹೇಳಿದೆ.

ದೇಶವ್ಯಾಪಿ ಇರುವ ನಮ್ಮ ಶ್ರಮಿಕ ಏಜೆಂಟರ ಕೌಶಲ, ನಿರಂತರ ಪರಿಶ್ರಮ ಹಾಗೂ ಬದ್ಧತೆಯಿಂದ ಇದು ಸಾಧ್ಯವಾಗಿದೆ. ಈ ಸಾಧನೆಯು ನಮ್ಮ ಗ್ರಾಹಕರು ಮತ್ತು ಅವರ ಕುಟುಂಬದವರಿಗೆ ಅತ್ಯಗತ್ಯವಾದ ಹಣಕಾಸು ನೆರವು ನೀಡುವ ನಮ್ಮ ಬದ್ಧತೆಯ ಪ್ರತಿಫಲನವಾಗಿದೆ’ ಎಂದು ಎಲ್‌ಐಸಿ ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!