ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿನಯ್ ಗೌಡ ಮತ್ತು ಮೋಕ್ಷಿತಾ ಪೈ ಬಿಗ್ಬಾಸ್ ಮನೆಯಿಂದ ಹೊರ ಬಂದ ಮೇಲೆ ಫೇಮಸ್ ಆಗಿದ್ದಾರೆ. 3ನೇ ರನ್ನರ್ ಅಪ್ ಅರ್ಥಾತ್ 4ನೇ ಸ್ಥಾನ ಪಡೆದಿದ್ದ ನಟಿ ಮೋಕ್ಷಿತಾ ಪೈ, ಬಿಗ್‌ಬಾಸ್‌ಗೂ ಮುನ್ನ ಪಾರು ಸೀರಿಯಲ್‌ನ ನಟನೆಯಿಂದ ಮನೆ ಮಾತಾಗಿದ್ದರು.
ಬಿಗ್‌ಬಾಸ್‌ಗೂ ಮುನ್ನ ವಿನಯ್ ಗೌಡ ಅವರು ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿದ್ದರು. ಇದೀಗ ಇವರಿಬ್ಬರೂ ಸೇರಿ ಅಭಿಮಾನಿಗಳಿಗೆ ಗುಡ್ನ್ಯೂಸ್ ನೀಡಿದ್ದಾರೆ. ಇವರಿಬ್ಬರು ಅಪ್ಪಿಕೊಂಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಸಲಿಗೆ ಈ ಗುಡ್ನ್ಯೂಸ್ ಏನೆಂದರೆ, ಇವರಿಬ್ಬರೂ ಸೇರಿ ವೆಬ್ಸೀರಿಸ್ ಒಂದರಲ್ಲಿ ನಟಿಸುತ್ತಿದ್ದಾರೆ. ಧೃತಿ ಕ್ರಿಯೇಷನ್ಸ್ನಲ್ಲಿ ನಿರ್ಮಾಣವಾಗುತ್ತಿರುವ ಈ ವೆಬ್ ಸೀರಿಸ್ ನ ಚಿಕ್ಕ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನಟರು ಇನ್ನಷ್ಟೇ ಮಾಹಿತಿ ನೀಡಬೇಕಿದೆ. ಇವರಿಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿರೋದಂತು ನಿಜ.