ಹೊಸದಿಗಂತ ಧಾರವಾಡ:
ನಾಡಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಭಾನುವಾರ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಅತ್ಯಂತ ತುರುಸಿನ ಮತದಾನ ನಡೆಯುತ್ತಿದೆ.
ಅಧ್ಯಕ್ಷ-ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಸಹಕಾರ್ಯದರ್ಶಿ, ಕಾರ್ಯಾಧ್ಯಕ್ಷ, ಕೋಶಾಧ್ಯಕ್ಷ ಸೇರಿ ಏಳು ಕಾರ್ಯಕಾರಿ ಸಮಿತಿ ಸೇರಿ ಒಟ್ಟು 15 ಸ್ಥಾನಗಳ ಚುನಾವಣೆಗೆ 44 ಅಭ್ಯರ್ಥಿಗಳು ಕಣದಲಿದ್ದಾರೆ.
ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ರವರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮತದಾರರು ತುಂತುರು ಮಳೆ ಲೆಕ್ಕೆಸದೆ ಮತದಾನ ಮಾಡುವ ದೃಶ್ಯ ಗೋಚರಿಸಿದವು.