ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಗಾರು ಪ್ರವೇಶದ ಬೆನ್ನಿಗೇ ಕರಾವಳಿ ಭಾಗದಲ್ಲಿ ಜಡಿ ಮಳೆ ಕಾಣಿಸಿಕೊಮಡಿದ್ದು, ಭಾನುವಾರ ಬೆಳಗ್ಗಿನಿಂದಲೇ ಆರಂಭವಾದ ಮಳೆ ಹಲವು ಅನಾಹುತಗಳಿಗೆ ಕಾರಣವಾಗಿದೆ.
ಮಂಗಳೂರು ನಗರದ ಪಂಪ್‌ವೆಲ್ ವೃತ್ತ ಬಳಿ ಮಳೆ ನೀರು ತುಂಬಿಕೊಂಡಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ನಗರದ ಕಾವೂರು ಸಹಿತ ಹಲವು ಕಡೆಗಳಲ್ಲಿ ರಸ್ತೆಗೆ ಮರ ಉರುಳಿಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಗಾಳಿ ಮಳೆ ಹಲವು ಅಧ್ವಾನ ಸೃಷ್ಟಿಸಿದ್ದು, ಬಿ.ಸಿ.ರೋಡ್, ಕಲ್ಲಡ್ಕ ಮೊದಲಾದ ಕಡೆಗಳಲ್ಲಿ ಸಂಚಾರಕ್ಕೆ ಸಂಚಕಾರ ಬಂದಿದೆ.