ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರಿನಲ್ಲಿ ಭಾರೀ ಗಾಳಿ ಮಳೆಯಾಗುತ್ತಿದ್ದು ಆಟೋ ಮೇಲೆ ಮರ ಮುರಿದುಬಿದ್ದು, ಚಾಲಕ ಮೃತಪಟ್ಟ ಘಟನೆ ಕೊಪ್ಪ ತಾಲೂಕಿನ ಭೈರೇದೇವರು ಗ್ರಾಮದಲ್ಲಿ ನಡೆದಿದೆ.
ಮೃತ ಆಟೋ ಚಾಲಕನನ್ನು ರತ್ನಾಕರ್ ಎಂದು ಗುರುತಿಸಲಾಗಿದೆ. ಭಾರೀ ಗಾಳಿ ಮಳೆಗೆ ಮರ ಆಟೋ ಮೇಲೆ ಬಿದ್ದಿದೆ, ಪರಿಣಾಮ ಆಟೋ ಜಖಂ ಆಗಿದೆ. ಅದರಲ್ಲಿ ಸಿಲುಕಿ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ.
ಗಾಳಿ ಮಳೆಯ ಅಬ್ಬರ ಮುಂದುವರೆದಿದ್ದು, ನಾಳೆ (26) ಸಹ ಮಳೆ ಮುಂದುವರೆಯಲಿದೆ ಎಂದು ವರದಿಯಾಗಿದೆ.