February 2, 2026
Monday, February 2, 2026
spot_img

ನಾವಿಬ್ಬರೂ ಒಂದೇ, ಪಕ್ಷವೇ ಸುಪ್ರೀಂ: ಒಗ್ಗಟ್ಟಿನ ಮಂತ್ರ ಜಪಿಸಿದ ಡಿಕೆಶಿ-ಸಿದ್ದರಾಮಯ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭೆಯಲ್ಲಿ ಇಂದು ಅಧಿಕಾರ ಹಂಚಿಕೆಯ ಬಿಸಿಬಿಸಿ ಚರ್ಚೆ ನಡೆದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರಸ್ಪರ ಬೆಂಬಲಕ್ಕೆ ನಿಲ್ಲುವ ಮೂಲಕ ವಿರೋಧ ಪಕ್ಷಗಳಿಗೆ ಖಡಕ್ ಉತ್ತರ ನೀಡಿದರು. ತಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬ ಸಂದೇಶ ರವಾನಿಸುವಲ್ಲಿ ಇಬ್ಬರೂ ನಾಯಕರು ಯಶಸ್ವಿಯಾದರು.

ತಮ್ಮ ಮತ್ತು ಸಿಎಂ ಸಂಬಂಧದ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ನಾನು ಮತ್ತು ಮುಖ್ಯಮಂತ್ರಿಗಳು ಪರಸ್ಪರರ ಕಷ್ಟ ಕಾಲದಲ್ಲಿ ಜೊತೆಯಾಗಿ ನಿಂತವರು. ಮುಂದೆಯೂ ಹಾಗೆಯೇ ಇರುತ್ತೇವೆ. ಏನೇ ತೀರ್ಮಾನ ಇದ್ದರೂ ಅದನ್ನು ಪಕ್ಷ ತೆಗೆದುಕೊಳ್ಳುತ್ತದೆ. 2028ಕ್ಕೆ ಏನಾಗುತ್ತೆ ಎಂದು ಅಲ್ಲಿಯವರೆಗೆ ಕಾದು ನೋಡೋಣ,” ಎನ್ನುವ ಮೂಲಕ ಸದ್ಯದ ಮಟ್ಟಿಗೆ ಅಧಿಕಾರ ಹಂಚಿಕೆಯ ಗೊಂದಲಗಳಿಗೆ ತೆರೆ ಎಳೆದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸುವಾಗ ಸಿಎಂ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಆರೋಪಗಳನ್ನು ಹಾಸ್ಯಮಯವಾಗಿಯೇ ಮಾತನಾಡಿದರು. ಪಕ್ಕದಲ್ಲೇ ಕುಳಿತಿದ್ದ ಡಿಕೆಶಿ ಕಡೆ ತಿರುಗಿ, “ನೋಡಪ್ಪಾ, ನಿನಗೂ ನನಗೂ ಹಾಲಾಹಲ ಇದೆಯಂತೆ ಕಣಯ್ಯ” ಎಂದು ಅಶೋಕ್ ಅವರ ಕಾಲೆಳೆದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಡಿಕೆಶಿ, “ಸಮಯ ಅದಕ್ಕೆ ಉತ್ತರ ನೀಡುತ್ತದೆ ಬಿಡಿ ಸರ್” ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !