ಟರ್ಕಿಗೆ ಸಹಾಯ ಮಾಡಿದ ಕೇರಳ ಸರಕಾರ: ತರಾಟೆಗೆ ತೆಗೆದುಕೊಂಡ ಶಶಿ ತರೂರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

2023 ರ ಭೂಕಂಪದ ಸಮಯದಲ್ಲಿ ಟರ್ಕಿಗೆ ಸಹಾಯ ಮಾಡಿದ್ದಕ್ಕಾಗಿ ಕೇರಳ ಸರ್ಕಾರವನ್ನು ಶಶಿ ತರೂರ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಆಪರೇಷನ್ ಸಿಂಧೂರ್ ಕುರಿತು ಕೇಂದ್ರದ ಅಂತಾರಾಷ್ಟ್ರೀಯ ಸಂಪರ್ಕದ ಭಾಗವಾಗಿರುವ ಶಶಿ ತರೂರ್, ಭಾರತದ ವಿರುದ್ಧದ ಬಿಕ್ಕಟ್ಟಿನಲ್ಲಿ ಪಾಕಿಸ್ತಾನಕ್ಕೆ ಟರ್ಕಿ ನೀಡಿದ ಬೆಂಬಲವನ್ನು ಉಲ್ಲೇಖಿಸಿದ್ದಾರೆ.

ಟರ್ಕಿಗೆ ಕೇರಳದ 10 ಕೋಟಿ ರೂ. ನೆರವಿನ ಬಗ್ಗೆ ಸುದ್ದಿಯನ್ನು ಪೋಸ್ಟ್ ಮಾಡಿದ ತರೂರ್, ಎಡ ಪ್ರಜಾಸತ್ತಾತ್ಮಕ ರಂಗ (LDF) ನೇತೃತ್ವದ ಸರ್ಕಾರ ತನ್ನ ತಪ್ಪಾದ ಔದಾರ್ಯದ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಭಾರತದಿಂದ ನೆರವು ಪಡೆದ ಎರಡು ವರ್ಷಗಳ ನಂತರ ಟರ್ಕಿಯ ನಡವಳಿಕೆಯನ್ನು ನೋಡಿದ ನಂತರ, ಕೇರಳ ಸರ್ಕಾರ ತನ್ನ ತಪ್ಪಾದ ಔದಾರ್ಯದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ ಎಂದು ನಾನು ಭಾವಿಸುತ್ತೇನೆ! ವಯನಾಡಿನ ಜನರು (ಕೇರಳದ ಒಂದು ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ) ಆ ಹತ್ತು ಕೋಟಿಗಳನ್ನು ಇನ್ನೂ ಉತ್ತಮವಾಗಿ ಬಳಸಬಹುದಿತ್ತು ಎಂದು ಅವರ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಶಶಿ ತರೂರ್‌ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ ಸಿಪಿಎಂನ ಜಾನ್ ಬ್ರಿಟಾಸ್, ಕೇಂದ್ರ ಸರ್ಕಾರ ಟರ್ಕಿಗೆ ಸಹಾಯಹಸ್ತ ಚಾಚಿ ಅದನ್ನು ಶಶಿ ತರೂರ್ ಪ್ರಶ್ನಿಸುತ್ತಿಲ್ಲ ಇದು ಕೇವಲ ಜಾಣ ಮರೆವುಎಂದು ಹೇಳಿದ್ದಾರೆ.ಶಶಿ ತರೂರ್‌ಗೆ ತುಂಬಾ ಧನ್ಯವಾದಗಳು. ಆದರೆ ಈ ಹೇಳಿಕೆ ಜಾಣ ಮರೆವಿನ ಲಕ್ಷಣಗಳಾಗಿವೆ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!