ನೀವು ದಿನವನ್ನು ಹೇಗೆ ಪ್ರಾರಂಭಿಸುತ್ತೀರಿ ಎಂಬುದೇ ನಿಮ್ಮ ದಿನದ ಮಾನಸಿಕ ಅರೋಗ್ಯ, ಉತ್ಪಾದಕತೆ ಹಾಗೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಬೆಳಗಿನ ಸಮಯವು ನಮ್ಮ ದೇಹ ಮತ್ತು ಮನಸ್ಸಿಗೆ ಶುದ್ಧ, ಶಕ್ತಿದಾಯಕ ಸಮಯವಾಗಿದ್ದು, ಈ ಸಮಯದಲ್ಲಿ ತೆಗೆದುಕೊಳ್ಳುವ ಉತ್ತಮ ಅಭ್ಯಾಸಗಳು ನಿಮ್ಮ ಇಡೀ ದಿನ ಹೇಗೆ ಹೋಗುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ.
ಅಗತ್ಯವಾದ ಪ್ರಮಾಣದ ನೀರು ಕುಡಿಯುವುದು
ರಾತ್ರಿ ನಿದ್ರೆಯ ನಂತರ ದೇಹದಲ್ಲಿ ನೀರಿನ ಕೊರತೆ ಉಂಟಾಗಿರಬಹುದು. ಬೆಳಿಗ್ಗೆ ಏಳು ತಕ್ಷಣ 1-2 ಗ್ಲಾಸ್ ತಾಜಾ ನೀರು ಕುಡಿಯುವುದು ದೇಹದ ಪ್ಯೂರಿಫಿಕೇಶನ್ ಪ್ರಕ್ರಿಯೆಗೆ ಸಹಕಾರಿಯಾಗುತ್ತದೆ ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ.
ನಿಮಿಷಗಳ ಧ್ಯಾನ ಅಥವಾ ಯೋಗ
10-15 ನಿಮಿಷಗಳ ಧ್ಯಾನ ಅಥವಾ ಯೋಗ ಪ್ರಾಥಮಿಕವಾಗಿ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ದಿನದ ಮೆದುಳಿನ ಕಾರ್ಯಕ್ಷಮತೆ, ಒತ್ತಡ ನಿರ್ವಹಣೆ ಮತ್ತು ಭಾವನಾತ್ಮಕ ಸಮತೋಲನವನ್ನು ಹೆಚ್ಚಿಸುತ್ತದೆ.
ಆರೋಗ್ಯಕರ ಬ್ರೇಕ್ ಫಾಸ್ಟ್ ಸೇವನೆ
ಬಾಳೆಹಣ್ಣು, ಒಣಹಣ್ಣುಗಳು, ಓಟ್ಸ್, ಮೊಸರು ಅಥವಾ ಇಡ್ಲಿ ಮುಂತಾದ ಪೌಷ್ಟಿಕಾಂಶ ತುಂಬಿದ ಬೆಳಗಿನ ಉಪಹಾರ ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ ಹಾಗೂ ದಿನವಿಡಿ ಉತ್ಸಾಹದಿಂದ ಇರಲು ಸಹಾಯ ಮಾಡುತ್ತದೆ.
ದಿನದ ಗುರಿಗಳನ್ನು ಬರೆದುಕೊಳ್ಳುವುದು ಅಥವಾ ಪ್ಲ್ಯಾನ್ ಮಾಡುವುದು
ದಿನದ ಗುರಿಗಳನ್ನು ಬರೆಯುವುದು ನಿಮ್ಮ ಫೋಕಸ್ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಇದು ಸಮಯದ ಸದುಪಯೋಗ ಮತ್ತು ನಿಮಗೆ ಪ್ರೇರಣೆಯೊಂದಿಗೆ ಕೆಲಸ ಮಾಡುವ ಭಾವನೆಯನ್ನು ನೀಡುತ್ತದೆ.
ಬೆಳಗಿನ ನಡಿಗೆ ಅಥವಾ ಹಗುರ ವ್ಯಾಯಾಮ
15-30 ನಿಮಿಷಗಳ ನಡಿಗೆ, ಜಾಗಿಂಗ್ ಅಥವಾ ಲಘು ವ್ಯಾಯಾಮ ದೇಹದ ಉತ್ಸಾಹವನ್ನು ಹೆಚ್ಚಿಸಿ, ರಕ್ತ ಸಂಚಾರ ಸುಧಾರಿಸುತ್ತವೆ. ಇದರಿಂದ ದೇಹ ಮತ್ತು ಮನಸ್ಸು ಚುರುಕುಗೊಳ್ಳುತ್ತದೆ.
ಬೆಳಗಿನ ಸಮಯವನ್ನು ಶಿಸ್ತುಬದ್ಧವಾಗಿ ಬಳಸಿಕೊಂಡು ಕೆಲವು ಸರಳ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಂಡರೆ, ನೀವು ನಿಮ್ಮ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಬಹುದು.