ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡಿದ್ದ ಸೂರ್ಯ ಮತ್ತು ಪೂಜಾ ಹೆಗ್ಡೆ ನಟಿಸಿರುವ ಆಕ್ಷನ್ ಡ್ರಾಮಾ ‘ರೆಟ್ರೋ’ ಈಗ OTT ಈ ಎಂಟ್ರಿ ಕೊಡೋದಕ್ಕೆ ಸಜ್ಜಾಗಿದೆ.
ಈ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ಅಧಿಕೃತವಾಗಿ ಸ್ಟ್ರೀಮ್ ಮಾಡಲಾಗುತ್ತದೆ. ಶೀಘ್ರದಲ್ಲೇ ಬರಲಿರುವ ವಿಭಾಗದಲ್ಲಿಈ ಚಿತ್ರವು ಮೇ 31, 2025 ರಿಂದ ತಮಿಳು, ತೆಲುಗು ಮತ್ತು ಇತರ ಹಲವಾರು ಪ್ರಮುಖ ಭಾರತೀಯ ಭಾಷೆಗಳಲ್ಲಿ ವೀಕ್ಷಿಸಲು ಲಭ್ಯವಿರುತ್ತದೆ ಎಂದು ಘೋಷಿಸಿದೆ.
ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ನಟಿ ಪೂಜಾ ಹೆಗ್ಡೆ ಜೊತೆಗೆ ಜೋಜು ಜಾರ್ಜ್, ಜಯರಾಮ್, ಪ್ರಕಾಶ್ ರಾಜ್ ಮತ್ತು ಇತರರು ನಟಿಸಿರುವ ಈ ಚಿತ್ರವು ಮೇ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.