ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯದ ಸ್ವರ್ಣಸಂದ್ರ ಯಾರೂ ಊಹಿಸದ ಕೆಟ್ಟ ಘಟನೆಯೊಂದು ನಡೆದುಹೋಗಿದೆ. ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದಾಗಿ ಮೂರು ವರ್ಷದ ಕಂದಮ್ಮನ ಪ್ರಾಣಪಕ್ಷಿ ಹಾರಿಹೋಗಿದೆ.
ರಸ್ತೆಯಲ್ಲೇ ಅಳುತ್ತಾ ಕುಳಿತ ತಂದೆ ನನ್ನ ಮಗಳು ನನಗೆ ಬೇಕು ಎಂದು ಕಣ್ಣೀರಿಟ್ಟಿದ್ದಾರೆ. ಪಾಪುಗೆ ನಾಯಿ ಕಚ್ಚಿತ್ತು. ಮದ್ದೂರಿನಿಂದ ಕರೆದುಕೊಂಡು ಬಂದ್ವಿ. ಇಲ್ಲಿನ ಸರ್ವೀಸ್ ರಸ್ತೆಯಲ್ಲಿ ಗಾಡಿಯನ್ನು ಅಡ್ಡ ಹಾಕಿದ್ದಾರೆ. ಆಗ ಅರ್ಜೆಂಟ್ ಅಲ್ಲಿ ಆಸ್ಪತ್ರೆಗೆ ಹೊರಟಿದ್ವಿ. ಆಗ ಗಾಡಿ ಮೂವ್ ಮಾಡಲು ಕೊಟ್ಟಿಲ್ಲ. ಅವರ ಗಾಡಿ ಅಡ್ಡ ಹಾಕಿದ ಪರಿಣಾಮ ನಮ್ಮ ಬೈಕ್ ಸ್ಕಿಡ್ ಆಗಿದೆ.
ಸ್ಕಿಡ್ ಆಗಿ ಮಗು ಬೀಳುತ್ತಿದ್ದಂತೆಯೇ ಬೇರೆ ವಾಹನ ಬಂದು ಪಾಪು ಮೇಲೆ ಹರಿದಿದೆ. ನನ್ನ ಮಗಳ ಜೀವ ತಿನ್ನೋಕೆ ಇವರೇ ಕಾರಣ ಸ್ವಾಮಿ. ಅವರಿಗೆ ಬ್ಯಾಂಡೇಜ್ ಹಾಕಿದ್ದೂ ಕಾಣಿಸಿಲ್ವಾ? ಇವರ ದುಡ್ಡನ್ನು ತಿಂದು ಹೋಗ್ತೀವಾ? ನನ್ನ ಮಗಳಿಗೆ ಪರಿಹಾರ ಕೊಡ್ತಾರಂತೆ. ನಾನೇ ಹತ್ತು ಲಕ್ಷ ಕೊಡ್ತೀನಿ ಸ್ವಾಮಿ ನನ್ನ ಮಗಳ ತಂದು ಕೊಡ್ತೀರಾ? ಎಂದು ಹೃತೀಕ್ಷ ತಂದೆ ಕಣ್ಣೀರಿಟ್ಟಿದ್ದಾರೆ.