1,000 ಗಡಿ ದಾಟಿದ ಕೊರೋನಾ: ಯಾವ ರಾಜ್ಯದಲ್ಲಿ ಅತಿ ಹೆಚ್ಚು ಕೇಸ್‌?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಳೆಯ ಅಬ್ಬರದ ನಡುವೆ 5 ದೆಹಲಿಯಿಂದ ಕರ್ನಾಟಕ, ಕೇರಳದವರೆಗೂ ಮತ್ತೆ ಕೊರೋನಾ ಸೋಂಕು ರಣಕೇಕೆಯನ್ನ ಶುರು ಮಾಡಿದೆ.

ಳೆದ ಒಂದು ವಾರದಲ್ಲಿ ದೇಶದಲ್ಲಿ 752 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 1,000ಕ್ಕೆ ಏರಿದೆ.

ಕೇರಳ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಅತಿ ಹೆಚ್ಚು ಹೊಸ ಸೋಂಕು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

ಕೇರಳದಲ್ಲಿ 335 ಹೊಸ ಸೋಂಕುಗಳು ವರದಿಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 430ಕ್ಕೆ ಏರಿದೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಕ್ರಮವಾಗಿ 153 ಮತ್ತು 99 ಹೊಸ ಪ್ರಕರಣಗಳು ದಾಖಲಾಗಿವೆ. ಸೋಮವಾರ ಬೆಳಗ್ಗೆ ಸರ್ಕಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳು ಕ್ರಮವಾಗಿ 209 ಮತ್ತು 104ರಷ್ಟಿವೆ.

ಗುಜರಾತ್‌ನಲ್ಲಿ 83 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ 47, ಉತ್ತರ ಪ್ರದೇಶದಲ್ಲಿ 15 ಮತ್ತು ಪಶ್ಚಿಮ ಬಂಗಾಳದಲ್ಲಿ 12 ಪ್ರಕರಣಗಳು ವರದಿಯಾಗಿವೆ.

ಬಂಗಾಳದಲ್ಲಿ ಮತ್ತೆ ನಾಲ್ಕು ಜನರಿಗೆ ಸೋಂಕು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಬಿಹಾರದಲ್ಲಿ ಮೊದಲ ವೈರಸ್ ಪ್ರಕರಣ ವರದಿಯಾಗಿದೆ. ಪಾಟ್ನಾದ 31 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.

ಯಾವ ರಾಜ್ಯದಲ್ಲಿ ಎಷ್ಟು ಸಾವು?
ಮಹಾರಾಷ್ಟ್ರದಲ್ಲಿ ಕೋವಿಡ್-19​ ಮಹಾಮಾರಿಗೆ ಕನಿಷ್ಠ ನಾಲ್ಕು ಮಂದಿ ಸಾವಾಗಿರೋ ವರದಿಯಾಗಿದೆ. ಕೇರಳದಲ್ಲಿ ಎರಡು ಸಾವುಗಳಾಗಿದ್ದರೆ, ಕರ್ನಾಟಕದಲ್ಲಿ ಒಂದು ಸಾವು ಆಗಿದೆ. ಮತ್ತೊಂದು ಆಘಾತದ ವರದಿ ಏನಂದರೆ ದೇಶಾದ್ಯಂತ ಒಟ್ಟು 1,009ರ ಗಡಿಯಲ್ಲಿ ಕೋವಿಡ್​ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕೋವಿಡ್-19 ಪೋರ್ಟಲ್ ಮಾಹಿತಿ ನೀಡಿದೆ.

ಅಂಡಮಾನ್ ಮತ್ತು ನಿಕೋಬಾರ್, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ ಕಡೆ ಯಾವುದೇ ಕೋವಿಡ್​​ ಪ್ರಕರಣಗಳು ವರದಿಯಾಗಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!