CINE | ಪವನ್ ಕಲ್ಯಾಣ್ ಅಭಿನಯದ ‘OG’ ರಿಲೀಸ್ ಡೇಟ್ ಔಟ್! ಇದೇ ವರ್ಷ ಬರ್ತಿದೆ ಎರಡು ಸಿನಿಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಓಜಿ ಚಿತ್ರದ ರಿಲೀಸ್ ಡೇಟ್ ಅನ್ನು ಚಿತ್ರತಂಡ ಅನೌನ್ಸ್ ಮಾಡಿದೆ. ಚಿತ್ರೀಕರಣದ ಕೆಲಸ ಇನ್ನು ಬಾಕಿ ಇದ್ದು ಅದಕ್ಕೂ ಮೊದಲೆ ಸಿನಿಮಾ ರಿಲೀಸ್ ಡೇ ಅನ್ನ ರಿವೀಲ್ ಮಾಡಿದೆ.

ಇದೇ ವರ್ಷ ಸೆಪ್ಟೆಂಬರ್-25 ರಂದು ಚಿತ್ರವನ್ನ ರಿಲೀಸ್ ಮಾಡಲಾಗುತ್ತಿದೆ. ಈ ಮೊದಲು ಈ ಚಿತ್ರವನ್ನ ಸೆಪ್ಟೆಂಬರ್-27 ರಂದು ರಿಲೀಸ್ ಮಾಡ್ತಾರೆ ಅನ್ನೋ ಸುದ್ದಿ ಇತ್ತು. ಆದರೆ, ಇದೀಗ ಸೆಪ್ಟೆಂಬರ್-25 ಫಿಕ್ಸ್ ಆಗಿದೆ. ಗ್ಯಾಂಗ್‌ಸ್ಟರ್ ಕಥೆ ಹೊಂದಿರೋ ಈ ಚಿತ್ರವನ್ನ ಸುಜೀತ್ ಡೈರೆಕ್ಷನ್ ಮಾಡಿದ್ದಾರೆ. ಬಾಕಿ ಇರುವ ಚಿತ್ರಿಕರಣದ ಬಳಿಕ ಪೋಸ್ಟ್ ಪ್ರೊಡಕ್ಷನ್ ಕೆಲಸವೂ ಮುಗಿಸಿಕೊಂಡು ರಿಲೀಸ್‌ಗೂ ರೆಡಿ ಆಗಲಿದೆ.

ಪವನ್ ಕಲ್ಯಾಣ್ ಅಭಿನಯದ ಮತ್ತೊಂದು ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಹಾಗೆ ಪವನ್ ಕಲ್ಯಾಣ್ ಅಭಿನಯದ ಹರಿ ಹರ ವೀರ ಮಲ್ಲು ಚಿತ್ರವೂ ರಿಲೀಸ್ ಆಗುತ್ತಿದೆ. ಈ ಚಿತ್ರ ಇದೇ ವರ್ಷ ಜೂನ್-12 ರಂದು ತೆರೆಗೆ ಬರ್ತಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!