ಎಗ್ ನೂಡಲ್ಸ್ ಒಂದು ಸುಲಭವಾದ ಮತ್ತು ರುಚಿಕರವಾದ ಖಾದ್ಯ. ಇಡೀ ರೆಸಿಪಿಗೆ 15-20 ನಿಮಿಷಗಳಷ್ಟೆ ಬೇಕಾಗುತ್ತದೆ. ಇದರಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ತರಕಾರಿ ಸೇರಿರುವ ಕಾರಣ ಪೌಷ್ಟಿಕವಾಗಿಯೂ ಇದೆ. ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗೋದು ಖಂಡಿತ.
ಬೇಕಾಗುವ ಪದಾರ್ಥಗಳು:
ನೂಡಲ್ಸ್ – 1 ಕಪ್
ಮೊಟ್ಟೆ – 2
ಈರುಳ್ಳಿ – 1
ಕ್ಯಾರಟ್, ಕ್ಯಾಪ್ಸಿಕಂ – ½ ಕಪ್
ಹಸಿರು ಮೆಣಸಿನಕಾಯಿ – 2
ಸೋಯಾ ಸಾಸ್ – 1 ಟೀಸ್ಪೂನ್
ಟೊಮೇಟೋ ಸಾಸ್ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮೆಣಸು ಪುಡಿ ಅಥವಾ ಪೆಪ್ಪರ್ ಪೌಡರ್ – ½ ಟೀಸ್ಪೂನ್
ಎಣ್ಣೆ – 1 ಟೇಬಲ್ ಸ್ಪೂನ್
ಮಾಡುವ ವಿಧಾನ:
ಒಂದು ಬಾಣಲೆಗೆ ನೀರು ಹಾಕಿ, ಉಪ್ಪು ಸೇರಿಸಿ, ನೂಡಲ್ಸ್‌ನ್ನು 5-6 ನಿಮಿಷ ಬೇಯಿಸಿ. ನಂತರ ಚೆನ್ನಾಗಿ ನೀರು ತೆಗೆದು ಒಣಗಿಸಿ ಇಡಿ.
ಈಗ ಬಾಣಲೆಗೆ ಎಣ್ಣೆ ಹಾಕಿ, ಮೊಟ್ಟೆ ತೊಡೆದು ಹಾಕಿ scramble ಮಾಡಿ. ಅದು ಬೇರೆ ಪಾತ್ರೆಗೆ ತೆಗೆದುಕೊಳ್ಳಿ. ಅದೇ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ, ಕ್ಯಾರಟ್, ಕ್ಯಾಪ್ಸಿಕಂ ಮತ್ತು ಹಸಿರು ಮೆಣಸಿನಕಾಯಿ ಹಾಕಿ 2-3 ನಿಮಿಷ ಹುರಿಯಿರಿ. ಹುರಿದ ತರಕಾರಿಗೆ ನೂಡಲ್ಸ್, ಮೊಟ್ಟೆ, ಸೋಯಾ ಸಾಸ್, ಟೊಮೇಟೋ ಸಾಸ್, ಉಪ್ಪು ಮತ್ತು ಮೆಣಸು ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಎಗ್ ನೂಡಲ್ಸ್ ರೆಡಿ.