ವಾಹನ ಸವಾರರ ಗಮನಕ್ಕೆ: ಇನ್ಮುಂದೆ ನಿಮ್ಮ ವಾಹನದ ಬಗ್ಗೆ ಗಮನ ಇರಲಿ, ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಹನ ಸವಾರರೇ ಗಮನಿಸಿ, ಇನ್ನು ಮುಂದೆ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಶುರುವಾಗಲಿದೆ. ಗೃಹ ಸಚಿವ ಪರಮೇಶ್ವರ್‌ ಅವರು ಅಧಿಕೃತವಾಗಿ ಟೋಯಿಂಗ್‌ ಆರಂಭಿಸಲಾಗುವುದು ಎಂದು ಘೋಷಿಸಿದ್ದಾರೆ.

ಬಾಡಿಗೆ ಟೋಯಿಂಗ್ ವಾಹನ ಬಳಸದೇ ಇಲಾಖೆಯ ವಾಹನ ಬಳಸಿಕೊಂಡು ಟೋಯಿಂಗ್ ನಡೆಸಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸರ್ಕಾರವೇ ಅಧಿಕೃತವಾಗಿ ಟೋಯಿಂಗ್‌ ಆರಂಭವಾಗುವ ಬಗ್ಗೆ ತಿಳಿಸಿದೆ.

ಪಾರ್ಕಿಂಗ್‌ ಅಲ್ಲದ ಜಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡಿದರೆ ಟೋಯಿಂಗ್‌ ವಾಹನ ಅವುಗಳನ್ನು ಎತ್ತಿಕೊಂಡು ಹೋಗಿ ಸಂಚಾರ ಠಾಣೆಯ ಮುಂದೆ ಇಡುತ್ತದೆ. ಮಾಲೀಕರು ಠಾಣೆಗೆ ತೆರಳಿ ದಂಡ ಕಟ್ಟಿ ವಾಹನಗಳನ್ನು ಬಿಡಿಸಿಕೊಳ್ಳಬೇಕಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!