ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಳ್ಳದಲ್ಲಿ ಎತ್ತಿನ ಗಾಡಿ ಮಗುಚಿ ಬಿದ್ದು ಇಬ್ಬರು ಮಕ್ಕಳು ಮತ್ತು ಒಂದು ಎತ್ತು ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರ ಪಿಎ ಗ್ರಾಮದಲ್ಲಿ ನಡೆದಿದೆ.
ಗಣೇಶ್ ಕಾಂಬಳೆ (9), ದೀಪಕ್ ಕಾಂಬಳೆ (11) ಮೃತ ದುರ್ದೈವಿಗಳು. ಸೇತುವೆ ಇಲ್ಲದಿರುವುದರಿಂದ, ಸಂಬರಗಿ ಗ್ರಾಮದಿಂದ ನಾಗನೂರ ಪಿಎ ಗ್ರಾಮಕ್ಕೆ ಹರಿಯುತ್ತಿರುವ ನೀರಿನಲ್ಲೇ ಎತ್ತಿನ ಗಾಡಿಯಲ್ಲಿ ತೆರಳಿದ್ದಾರೆ. ನೀರಿನ ರಭಸಕ್ಕೆ ಎತ್ತಿನ ಗಾಡಿ ಮಗುಚಿ ಬಿದ್ದಿದೆ.
ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.