ಈ ನಾಯಕಿ ಜೊತೆ ಹೋಲಿಸಿ ಊರ್ವಶಿ ರೌಟೇಲಾ ಟ್ರೋಲ್‌! ನಾನು ಯಾರ ‘Copy’ನೂ ಅಲ್ಲ ಎಂದ ನಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2025 ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಮೊದಲ ದಿನ ಕಾಣಿಸಿಕೊಂಡಿದ್ದ ಊರ್ವಶಿ ರೌಟೇಲಾ ಎಲ್ಲರ ಗಮನ ಸೆಳೆದಿದ್ದರು.

ಆದರೆ ಕೇನ್ಸ್ ನಲ್ಲಿ ಅವರು ಐಶ್ವರ್ಯಾ ರೈ ಬಚ್ಚನ್ ಅವರನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹಲವಾರು ಲೇಖನಗಳು ಅಂತರ್ಜಾಲದಲ್ಲಿ ಹರಿದಾಡಿವೆ. ಈ ಕುರಿತು ತಿರುಗೇಟು ನೀಡಿರುವ ಊರ್ವಶಿ ತಾನು ಯಾರ ‘ಕಾಪಿಯೂ’ ಅಲ್ಲ ಎಂದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.

Bollywood Star Aishwarya Rai Makes Red Carpet Return for Cannes 2018! | 2018 Cannes Film Festival, Aishwarya Rai | Just Jared: Celebrity Gossip and Breaking Entertainment News

“0 ವರ್ಚಸ್ಸಿನೊಂದಿಗೆ ಐಶ್ವರ್ಯಾ ರೈ ಆಗಲು ಪ್ರಯತ್ನಿಸುತ್ತಿದ್ದಾರೆ” ಎಂದು ಬರೆದ ಪೋಸ್ಟ್ ಅನ್ನು ಹಂಚಿಕೊಂಡ ಊರ್ವಶಿ ‘ಐಶ್ವರ್ಯಾ ಐಕಾನಿಕ್. ಆದರೆ ನಾನು ಯಾರ ಕಾಪಿ ಆಗಲು ಇಲ್ಲಿ ಬಂದಿಲ್ಲ. ನಾನು ನೀಲನಕ್ಷೆ. ಕ್ಯಾನ್ಸ್ ನನ್ನನ್ನು ಎಲ್ಲರೊಂದಿಗೆ ಸಮ್ಮಿಲನಗೊಳ್ಳಲು ಆಹ್ವಾನಿಸಲಿಲ್ಲ. ನಾನು ಎಲ್ಲರಂತೆ ಎದ್ದು ಕಾಣಲು ಬಂದಿದ್ದೇನೆ ಎಂದಿದ್ದಾರೆ.

ಊರ್ವಶಿ ಅದರ ಉದ್ಘಾಟನಾ ಸಮಾರಂಭ ಮತ್ತು ‘ಪಾರ್ಟಿಯರ್ ಅನ್ ಜೋರ್’ (ಲೀವ್ ಒನ್ ಡೇ) ಚಿತ್ರದ ಪ್ರದರ್ಶನಕ್ಕಾಗಿ ರೆಡ್ ಕಾರ್ಪೆಟ್ ಮೇಲೆ ನಡೆದಿದ್ದರೆ. ಅವರ ಕೈಯಲ್ಲಿ ಒಂದು ವಿಶೇಷ ‘ಗಿಳಿ’ ಕೂಡ ಇತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!