ಮಕ್ಕಳ ಮೊಬೈಲ್‌ ಅಡಿಕ್ಷನ್‌ ಬಿಡಿಸೋಕೆ ಸಹಾಯ ಹಸ್ತ ಚಾಚಿದ ನಿಮ್ಹಾನ್ಸ್‌, ಆನ್‌ಲೈನ್‌ ಮೀಟಿಂಗ್‌ ಅಟೆಂಡ್‌ ಆಗಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಕ್ಕಳ ಮೊಬೈಲ್‌ ಹಾಗೂ ಟಿವಿ ಅಡಿಕ್ಷನ್‌ನ್ನು ಬಿಡಿಸೋದಕ್ಕೆ ನಿಮ್ಹಾನ್ಸ್‌ ಪೋಷಕರ ಜೊತೆಗೂಡಿದೆ. ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ನಿಮ್ಹಾನ್ಸ್ ಧಾವಿಸಲಿದೆ.

ಅತಿಯಾದ ಸ್ಕ್ರೀನ್ ಸಮಯ, ಗೇಮಿಂಗ್, ಸಾಮಾಜಿಕ ಮಾಧ್ಯಮ ಬಳಕೆ ಹಾಗೂ ಟೆಕ್ನಾಲಜಿ ಅಡಿಕ್ಷನ್ ತಪ್ಪಿಸಲು ಪೋಷಕರಿಗೆ ನೆರವಾಗಲು ಉಚಿತ ಆನ್​ಲೈನ್ ಸೆಷನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿಮ್ಹಾನ್ಸ್ ನಿರ್ಧರಿಸಿದೆ.

ಎಸ್​​ಎಚ್​​ಯುಟಿ ಕ್ಲಿನಿಕ್ ಮತ್ತು ಯೋಗಕ್ಷೇಮ ಕೇಂದ್ರ ಜಂಟಿಯಾಗಿ ಈ ಸೆಷನ್​ ಹಮ್ಮಿಕೊಂಡಿವೆ. ಇದು ಮಕ್ಕಳಲ್ಲಿ ತಂತ್ರಜ್ಞಾನ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಲು ತಜ್ಞರ ಮಾರ್ಗದರ್ಶನ, ಪ್ರಾಯೋಗಿಕ ತಂತ್ರಗಳ ಮಾಹಿತಿ ಮತ್ತು ಬೆಂಬಲವನ್ನು ನೀಡಲಿದೆ.

ಮಕ್ಕಳಲ್ಲಿ ಸ್ಕ್ರೀನ್​ ಟೈಮ್ ಕಡಿಮೆ ಮಾಡಲು, ವರ್ತನೆಯಲ್ಲಿನ ಬದಲಾವಣೆ ನಿರ್ವಹಣೆ ಮಾಡಲು ಬೇಕಾದ ತಂತ್ರಗಳ ಅರಿವು ಮೂಡಿಸುವ ಮೂಲಕ ಪೋಷಕರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಂತ್ರಜ್ಞಾನದ ಸದ್ಬಳಕೆ ಮತ್ತು ಅಡಿಕ್ಷನ್ ನಡುವಣ ಸೂಕ್ಷ್ಮವನ್ನು ಮಕ್ಕಳಿಗೆ ತಿಳಿಯಪಡಿಸಲು, ಸಂಘರ್ಷಗಳನ್ನು ಪರಿಹರಿಸಲು ಪರಿಣಾಮಕಾರಿ ಮಾರ್ಗಗಳನ್ನು ತೋರಿಸಿಕೊಡಲು ಈ ಸೆಷನ್​​ ಪೋಷಕರಿಗೆ ನೆರವಾಗಲಿದೆ. ಆ ಮೂಲಕ ಕುಟುಂಬವೊಂದರ ಒಟ್ಟಾರೆ ಪರಿಸ್ಥಿತಿಯನ್ನು ಸುಧಾರಿಸುವುದು ಹಾಗೂ ಆರೋಗ್ಯಕರ ದಿನಚರಿ ಅನುಸರಿಸುವಂತೆ ಮಾಡುವುದು ಸಹ ಈ ಕಾರ್ಯಕ್ರಮದ ಉದ್ದೇಶ ಎನ್ನಲಾಗಿದೆ.

ಈ ಸೆಷನ್​​ನಲ್ಲಿ, ತಂತ್ರಜ್ಞಾನ ಅತಿಯಾದ ಬಳಕೆಗೆ ಸಂಬಂಧಿಸಿದ ಸಾಮಾನ್ಯ ಮಾನಸಿಕ ಆರೋಗ್ಯ ತೊಂದರೆಗಳ ಬಗ್ಗೆ ಪೋಷಕರು ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ. ಪರಿಣಿತ ಮನಃಶ್ಶಾಸ್ತ್ರಜ್ಞರಿಂದ ಮಾರ್ಗದರ್ಶನ ಪಡೆಯಬಹುದಾಗಿದೆ. ಪೋಷಕರು ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವುದರ ಜತೆಗೆವೈಯಕ್ತಿಕವಾಗಿ ಸಲಹೆ ಸೂಚನೆಗಳನ್ನು ಪಡೆಯಬಹುದಾಗಿದೆ. ಸಾರ್ವಜನಿಕರಿಗೆ ನೆರವಾಗುವ ಉದ್ದೇಶದೊಂದಿಗೆ ಆನ್​​ಲೈನ್ ಸೆಷನ್​​ಗಳನ್ನು ವಾರಾಂತ್ಯದಲ್ಲಿ ಆಯೋಜಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!