ಜಿಯೋ ಫೈನಾನ್ಷಿಯಲ್ ಸರ್ವೀಸಸ್ : ಬ್ಲ್ಯಾಕ್ ರಾಕ್ ಜಂಟಿ ಉದ್ಯಮಕ್ಕೆ ಸೆಬಿಯಿಂದ ಅನುಮತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ಹಾಗೂ ಬ್ಲ್ಯಾಕ್ ರಾಕ್ ಎರಡೂ ಸೇರಿ ಘೋಷಿಸಿದ್ದ 50:50 ಜಂಟಿ ಉದ್ಯಮ ಜಿಯೋ ಬ್ಲ್ಯಾಕ್ ರಾಕ್ ಅಸೆಟ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಗೆ ಸೆಬಿ ಅನುಮತಿ ದೊರೆತಿದೆ.

ಇನ್ನು ಮುಂದೆ ಭಾರತದಲ್ಲಿ ಮ್ಯೂಚುವಲ್ ಫಂಡ್ ವ್ಯವಹಾರದ ಕಾರ್ಯಾಚರಣೆ ಆರಂಭ ಮಾಡುವುದಕ್ಕೆ ಅನುಮತಿ ಸಿಕ್ಕಿದೆ. ಹೆಚ್ಚಳ ಆಗುತ್ತಿರುವ ಭಾರತೀಯ ರೀಟೇಲ್ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ನವೀನ ಹೂಡಿಕೆ ಸಾಧ್ಯತೆಗಳನ್ನು ಜಿಯೋಬ್ಲ್ಯಾಕ್ ರಾಕ್ ಅಸೆಟ್ ಮ್ಯಾನೇಜ್ ಮೆಂಟ್ ತರಲಿದೆ. ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಗೆ ಇರುವಂಥ ಡಿಜಿಟಲ್ ವ್ಯಾಪಕತೆ ಮತ್ತು ಸ್ಥಳೀಯ ಮಾರುಕಟ್ಟೆ ಬಗ್ಗೆ ಇರುವಂಥ ಆಳವಾದ ತಿಳಿವಳಿಕೆ ಹಾಗೂ ಇದರ ಜೊತೆಗೆ ಬ್ಲ್ಯಾಕ್ ರಾಕ್ ಗೆ ಇರುವಂಥ ಜಾಗತಿಕ ಹೂಡಿಕೆ ಪರಿಣತಿ ಮತ್ತು ಪ್ರಮುಖ ರಿಸ್ಕ್ ಮ್ಯಾನೇಜ್ ಮೆಂಟ್ ಟೆಕ್ನಾಲಜಿ ಜೊತೆಯಾಗಿ ಈ ಜಂಟಿ ಉದ್ಯಮವು ವಿಶಿಷ್ಟ ಅಸೆಟ್ ಮ್ಯಾನೇಜ್ ಮೆಂಟ್ ಆಗಲಿದೆ.

ಜಿಯೋ ಬ್ಲ್ಯಾಕ್ ರಾಕ್ ಅಸೆಟ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ವೈಶಿಷ್ಟ್ಯ ಏನೆಂದರೆ, ಸ್ಪರ್ಧಾತ್ಮಕ ಮತ್ತು ಪಾರದರ್ಶಕ ಬೆಲೆ ಹಾಗೂ ನಾವೀನ್ಯತೆಯ ಉತ್ಪನ್ನಗಳನ್ನು ಹೂಡಿಕೆದಾರರಿಗೆ ಒದಗಿಸಲಿದೆ. ಇದರೊಂದಿಗೆ ಬ್ಲ್ಯಾಕ್ ರಾಕ್ ನ ರಿಸ್ಕ್ ಮ್ಯಾನೇಜ್ ಮೆಂಟ್ ಪರಿಣತಿಯ ಅಪ್ಲಿಕೇಷನ್ ಬೆಂಬಲ ಸಹ ಇರುತ್ತದೆ. ಇದರಲ್ಲಿ ಬ್ಲ್ಯಾಕ್ ರಾಕ್ ಗೆ ಸೇರಿದ ಜಾಗತಿಕವಾಗಿ ಹೆಸರಾದಂಥ ಸ್ವಂತ ಟೆಕ್ನಾಲಜಿ ಪ್ಲಾಟ್ ಫಾರ್ಮ್ ಅಲಾದೀನ್ ಕೂಡ ಒಳಗೊಂಡಿದೆ. ಈ ಪ್ಲಾಟ್ ಫಾರ್ಮ್ ಒಂದು ಸಾಮಾನ್ಯ ಡೇಟಾ ಲಾಂಗ್ವೇಜ್ ಮೂಲಕವಾಗಿ ಹೂಡಿಕೆ ನಿರ್ವಹಣೆ ಪ್ರಕ್ರಿಯೆ ಮಾಡುವುದನ್ನು ಏಕೀಕರಣಗೊಳಿಸುತ್ತದೆ..

ಜಿಯೋ ಬ್ಲ್ಯಾಕ್ ರಾಕ್ ಅಸೆಟ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ರೀಟೇಲ್ ಹೂಡಿಕೆದಾರರಿಗೆ ಡಿಜಿಟಲ್ ಫಸ್ಟ್ ಎಂಬ ಗ್ರಾಹಕರ ಆದ್ಯತೆ ಮೇಲೆ ವಿವಿಧ ಸೇವೆಗಳನ್ನು ಒಗದಿಸಲಿದೆ. ಈ ಜಂಟಿ ಉದ್ಯಮದ ಮೂಲಕ ವ್ಯಾಪಕ ಶ್ರೇಣಿಯ ಹೂಡಿಕೆ ಉತ್ಪನ್ನಗಳನ್ನು ಆರಂಭಿಸಲಾಗುತ್ತದೆ. ಇದರಲ್ಲಿ ಬ್ಲ್ಯಾಕ್ ರಾಕ್ ಉದ್ಯಮ- ಮುಂಚೂಣಿ ಸಾಮರ್ಥ್ಯದ ಡೇಟಾ ಚಾಲಿತ ಹೂಡಿಕೆಯನ್ನು ಸಹ ಮುಂಬರುವ ತಿಂಗಳುಗಳಲ್ಲಿ ಅನ್ವಯಿಸುತ್ತದೆ.

ಸಿದ್ ಸ್ವಾಮಿನಾಥನ್ ಅವರನ್ನು ಹೊಸ ಅಸೆಟ್ ಮ್ಯಾನೇಜ್ ಮೆಂಟ್ ಕಂಪನಿಯ ಎಂ.ಡಿ., ಹಾಗೂ ಸಿಇಒ ಆಗಿ ನೇಮಕ ಮಾಡಲಾಗಿದೆ.

ಜಿಯೋ ಫೈನಾನ್ಷಿಯಲ್ ಲಿಮಿಟೆಡ್ ಕಾರ್ಯ ನಿರ್ವಾಹಕೇತರ ನಿರ್ದೇಶಕಿ ಇಶಾ ಅಂಬಾನಿ ಅವರು ಮಾತನಾಡಿ ,ಭಾರತದ ವೇಗವಾದ ಬೆಳವಣಿಗೆಗೆ ದಿಟ್ಟ ಆಕಾಂಕ್ಷೆಗಳನ್ನು ಹೊಂದಿರುವ ಹೊಸ ಪೀಳಿಗೆಯೇ ಕಾರಣ. ಬ್ಲ್ಯಾಕ್‌ರಾಕ್‌ನೊಂದಿಗಿನ ನಮ್ಮ ಪಾಲುದಾರಿಕೆಯು ಜಾಗತಿಕ ಹೂಡಿಕೆ ಪರಿಣತಿ ಮತ್ತು ಜಿಯೋದ ಡಿಜಿಟಲ್-ಮೊದಲ ನಾವೀನ್ಯತೆಯ ಗಟ್ಟಿಯಾದ ಸಂಯೋಜನೆ ಆಗಿದೆ. ಇವು ಒಟ್ಟಾಗಿ, ಪ್ರತಿ ಭಾರತೀಯರಿಗೂ ಹೂಡಿಕೆಯನ್ನು ಸರಳ, ಎಲ್ಲರಿಗೂ ತಲುಪುವ ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ಮಾಡಲು ನಾವು ಬದ್ಧರಾಗಿದ್ದೇವೆ. ಭಾರತದಲ್ಲಿ ಆರ್ಥಿಕ ಸಬಲೀಕರಣದ ಭವಿಷ್ಯವನ್ನು ರೂಪಿಸುವಲ್ಲಿ ಜಿಯೋಬ್ಲಾಕ್‌ರಾಕ್ ಆಸ್ತಿ ನಿರ್ವಹಣೆ ಪರಿವರ್ತಕ ಪಾತ್ರವನ್ನು ವಹಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.

ಬ್ಲ್ಯಾಕ್ ರಾಕ್ ಅಂತಾರಾಷ್ಟ್ರೀಯ ಮುಖ್ಯಸ್ಥ ರಾಶೆಲ್ ಲಾರ್ಡ್ ಮಾತನಾಡಿ , ಭಾರತದಲ್ಲಿ ಇಂದು ಅಸೆಟ್ ಮ್ಯಾನೇಜ್ ಮೆಂಟ್ ನಲ್ಲಿನ ಅವಕಾಶಗಳು ತುಂಬ ರೋಮಾಂಚಕಾರಿಯಾಗಿದೆ. ಜಿಯೋಬ್ಲಾಕ್‌ರಾಕ್‌ನ ಡಿಜಿಟಲ್-ಮೊದಲು ಎಂಬ ಗ್ರಾಹಕ ಪ್ರತಿಪಾದನೆ, ಕಡಿಮೆ ವೆಚ್ಚದಲ್ಲಿ ಸಾಂಸ್ಥಿಕ ಗುಣಮಟ್ಟದ ಉತ್ಪನ್ನಗಳನ್ನು ನೇರವಾಗಿ ಹೂಡಿಕೆದಾರರಿಗೆ ತಲುಪಿಸುವುದು, ಭಾರತದಲ್ಲಿ ಹೆಚ್ಚಿನ ಜನರು ಬಂಡವಾಳ ಮಾರುಕಟ್ಟೆಗಳಿಗೆ ಪ್ರವೇಶದ ಹಲವು ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ನಮ್ಮ ಪಾಲುದಾರ ಜೆಎಫ್‌ಎಸ್‌ಎಲ್ ಜೊತೆಗೆ, ಉಳಿತಾಯ ಮಾಡುವ ರಾಷ್ಟ್ರದಿಂದ ಹೂಡಿಕೆದಾರರ ರಾಷ್ಟ್ರವಾಗಿ ದೇಶದ ನಿರಂತರ ವಿಕಸನಕ್ಕೆ ಕೊಡುಗೆ ನೀಡುವುದಕ್ಕೆ ನಾವು ಎದುರು ನೋಡುತ್ತಿದ್ದೇವೆ ಎಂದರು.

ಕಂಪನಿಯ ಎಂ.ಡಿ., ಹಾಗೂ ಸಿಇಒ ಸಿದ್ ಸ್ವಾಮಿನಾಥನ್ ಅವರು ಮಾತನಾಡಿ , ಜಿಯೋಬ್ಲಾಕ್‌ರಾಕ್ ಅಸೆಟ್ ಮ್ಯಾನೇಜ್ ಮೆಂಟ್ ಭಾರತದಾದ್ಯಂತ ಹೂಡಿಕೆದಾರರಿಗೆ ಸಾಂಸ್ಥಿಕ ಗುಣಮಟ್ಟದ ಹೂಡಿಕೆ ಉತ್ಪನ್ನಗಳನ್ನು ಡಿಜಿಟಲ್ ರೂಪದಲ್ಲಿ ತಲುಪಿಸುವ ಗುರಿಯನ್ನು ಹೊಂದಿದೆ ಮತ್ತು ದೇಶದ ಹೂಡಿಕೆ ಪರಿಸರ ವ್ಯವಸ್ಥೆಯ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ಜಿಯೋಬ್ಲಾಕ್‌ರಾಕ್ ಆಸ್ತಿ ನಿರ್ವಹಣೆಯನ್ನು ಮುನ್ನಡೆಸಲು ಮತ್ತು ಹೂಡಿಕೆದಾರರು ಹೂಡಿಕೆಯ ಸಾಮರ್ಥ್ಯವನ್ನು ನೇರವಾಗಿ ಬಳಸಿಕೊಳ್ಳಲು ಸಬಲಗೊಳಿಸುವ ಮೂಲಕ ಭಾರತದಲ್ಲಿ ಅಸೆಟ್ ಮ್ಯಾನೇಜ್ ಮೆಂಟ್ ಪರಿವರ್ತನೆಗೆ ಸಹಾಯ ಮಾಡುವುದು ನಮಗೆ ಗೌರವವಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!