ಶೇ.96ರಷ್ಟು ಅಂಕ ಇದ್ದರೂ ಫೇಲ್‌ ಅನ್ನೋ ರಿಸಲ್ಟ್‌: ಐಐಐಟಿ ಅವಕಾಶ ಕಳೆದುಕೊಂಡ ವಿದ್ಯಾರ್ಥಿನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

10ನೇ ತರಗತಿಯಲ್ಲಿ ಶೇ 96ರಷ್ಟು ಅಂಕಗಳಿಸಿದ ವಿದ್ಯಾರ್ಥಿನಿಗೆ ಫಲಿತಾಂಶ ನೀಡುವಿಕೆ ವೇಳೆ ಫೇಲ್​ ಎಂದು ನೀಡಿದ ಪರಿಣಾಮ ಇದೀಗ ಆಕೆ ಐಐಐಟಿ ಅವಕಾಶ ತಪ್ಪಿಸಿಕೊಂಡಿದ್ದಾಳೆ. ಒಂದು ಸಣ್ಣ ತಪ್ಪಿನಿಂದ ವಿದ್ಯಾರ್ಥಿನಿಯ ಜೀವನವೇ ಬದಲಾಗಿದೆ.

ಆಂಧ್ರಪ್ರದೇಶದ ಕೊಲ್ಲೂರಿನಲ್ಲಿನ ಜಿಲ್ಲಾ ಪರಿಷದ್​ ಪ್ರೌಢ ಶಾಲಾ ವಿದ್ಯಾರ್ಥಿನಿ ತೇಜಸ್ವಿನಿಯ 10ನೇ ತರಗತಿ ಫಲಿತಾಂಶ ಪ್ರಕಟವಾದ ಕೂಡಲೇ ಎಲ್ಲರೂ ಅಚ್ಚರಿಗೆ ಒಳಗಾದರು. ಕಾರಣ ಎಸ್​ಎಸ್​ಸಿ ಫಲಿತಾಂಶದಲ್ಲಿ ಆಕೆ ಫೇಲ್​ ಆಗಿದ್ದಾಳೆ ಎಂದು ಫಲಿತಾಂಶ ಪ್ರಕಟವಾಗಿದೆ. ಇದರಿಂದ ಗೊಂದಲಕ್ಕೆ ಒಳಗಾದ ವಿದ್ಯಾರ್ಥಿನಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ 100ಕ್ಕೆ 96 ಫಲಿತಾಂಶ ಪಡೆದುಕೊಂಡಿದ್ದಾಳೆ.

ಐದು ವಿಷಯಗಳಲ್ಲಿ 90ಕ್ಕಿಂತ ಹೆಚ್ಚು ಅಂಕ ಪ್ರಕಟವಾಗಿದ್ದು, ಸಮಾಜ ವಿಜ್ಞಾನದಲ್ಲಿ ಮಾತ್ರ 23 ಅಂಕ ನೀಡಲಾಗಿದ್ದು, ಆಕೆ ಫಲಿತಾಂಶದಲ್ಲಿ ಫೇಲ್​ ಎಂದು ಪ್ರಕಟಗೊಂಡಿತ್ತು. ಏನೋ ಎಡವಟ್ಟು ಆಗಿದೆ ಎಂದು ಅರಿತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾಗ 100ಕ್ಕೆ 96 ಅಂಕಗಳು ಲಭ್ಯವಾಗಿವೆ.

ಈ ಮರು ಮೌಲ್ಯಮಾಪನದಲ್ಲಿ ಆಕೆ 600ಕ್ಕೆ 575 ಅಂಕಗಳಿಸುವ ಮೂಲಕ ಐಐಐಟಿ ಪ್ರವೇಶಕ್ಕೆ ಅರ್ಹತೆಯನ್ನು ಪಡೆದಿದ್ದಾಳೆ. ಆದರೆ, ದುರದೃಷ್ಟವಶಾತ್​ ಅರ್ಜಿ ಸಲ್ಲಿಕೆಯ ಅವಧಿ ಮೇ 20ಕ್ಕೆ ಮುಕ್ತಾಯವಾಗಿದೆ. ಎಸ್​ಎಸ್​ಸಿಯಿಂದಾದ ತಪ್ಪಿನಿಂದಾಗಿ ಈಗ ಪ್ರವೇಶ ನಿರಾಕರಿಸಲಾಗಿದೆ.

 ತೇಜಸ್ವಿನಿ ತಂದೆ ದಿನಗೂಲಿ ನೌಕರರಾಗಿದ್ದು, ಮಗಳನ್ನು ವಿದ್ಯಾವಂತೆ ಮಾಡಬೇಕು ಎಂಬ ಕನಸು ಕಂಡಿದ್ದರು. ಅದಕ್ಕೆ ತಕ್ಕಂತೆ ಆಕೆ ಕೂಡ ಚೆನ್ನಾಗಿ ಓದಿ ಐಐಐಟಿ ಸೇರುವ ಕನಸು ಕಂಡಿದ್ದಳು. ಆದರೆ, ಶಿಕ್ಷಣ ಇಲಾಖೆ ತಪ್ಪಿನಿಂದಾಗಿ ಆಕೆ ಪ್ರವೇಶ ಪಡೆಯುವಲ್ಲಿ ವಿಫಲವಾಗಿದ್ದಾಳೆ. ಇದರಿಂದ ಆಕೆ ಪಾಲಿಗೆ ಸಿಕ್ಕ ಸುವರ್ಣಾವಕಾಶವೊಂದು ತಪ್ಪಿದ್ದು, ಇದೊಂದು ವಿಶೇಷ ಪ್ರಕರಣ ಎಂದು ಭಾವಿಸಿ ಆಕೆಗೆ ಪ್ರವೇಶ ಕೊಡುವಂತೆ ಶಿಕ್ಷಣ ಅಧಿಕಾರಿಗಳು ಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!