ಉನ್ನಿ ಮುಕುಂದನ್ ವಿರುದ್ಧ ಕೇಸ್ ಕೊಟ್ಟ ಮ್ಯಾನೇಜರ್: ಸ್ಪಷ್ಟನೆ ನೀಡಿದ್ರು ಮಲಯಾಳಂ ನಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲಯಾಳಂನ ಸೂಪರ್ ಹಿಟ್ ಸಿನಿಮಾ ‘ಮಾರ್ಕೊ’ದ ನಾಯಕ ಉನ್ನಿ ಮುಕುಂದನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಉನ್ನಿ ಮುಕುಂದನ್ ವಿರುದ್ಧ ಅವರ ಮ್ಯಾನೇಜರ್ ಅವರೇ ದೂರು ನೀಡಿದ್ದಾರೆ.

ನಟ ಉನ್ನಿ ಮುಕುಂದನ್ ಅವರ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವಿಪಿನ್ ಎಂಬುವರು ಕೇರಳದ ಕೊಚ್ಚಿಯಲ್ಲಿ ಉನ್ನಿ ಮುಕುಂದನ್ ವಿರುದ್ಧ ದೂರು ನೀಡಿದ್ದಾರೆ. ಉನ್ನಿ ಮುಕುಂದನ್ ತಮ್ಮ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವುದು ಮಾತ್ರವೇ ಅಲ್ಲದೆ ಅಶ್ಲೀಲ ಪದಗಳನ್ನು ಬಳಸಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ವಿಪಿನ್, ಕೊಚ್ಚಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟ ಉನ್ನಿ ಮುಕುಂದನ್, ನನ್ನ ಮೇಲೆ ಹೇರಲಾಗಿರುವ ಆರೋಪಗಳೆಲ್ಲ ಸುಳ್ಳು ಎಂದಿದ್ದಾರೆ. ನಾನು ಹಾಗೂ ವಿಪಿನ್ ಭೇಟಿ ಮಾಡಿದ ಸಂದರ್ಭದ ಸಿಸಿಟಿವಿ ದೃಶ್ಯಾವಳಿ ಸಾಕ್ಷಿಯಾಗಿದೆ. ಅಲ್ಲದೆ ವಿಪಿನ್ ನನ್ನ ಖಾಸಗಿ ಮ್ಯಾನೇಜರ್ ಆಗಿಯೇ ಇರಲಿಲ್ಲ’ ಎಂದಿದ್ದಾರೆ ಉನ್ನಿ ಮುಕುಂದನ್.

ತಮ್ಮ ಹಾಗೂ ವಿಪಿನ್ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣ ಮಲಯಾಳಂನ ಕೆಲವು ನಟಿಯರನ್ನು ಭೇಟಿ ಆಗುತ್ತಿದ್ದ ವಿಪಿನ್, ಮುಕುಂದನ್ ಅನ್ನು ಮದುವೆ ಆಗುವಂತೆ ನಟಿಯರನ್ನು ಕೇಳುತ್ತಿದ್ದ, ಇದೇ ಕಾರಣಕ್ಕೆ ನನ್ನ ಹಾಗೂ ವಿಪಿನ್ ನಡುವೆ ಭಿನ್ನಾಭಿಪ್ರಾಯ ಮೂಡಿತು. 2018 ರಲ್ಲಿ ಆ ವ್ಯಕ್ತಿ ತಮ್ಮ ಬ್ಯಾನರ್​ನಲ್ಲಿ ಸಿನಿಮಾ ನಿರ್ಮಾಣ ಮಾಡುವುದಾಗಿ ನನ್ನ ಪರಿಚಯ ಬೆಳೆಸಿಕೊಂಡ. ತಾನು ಮಲಯಾಳಂ ಚಿತ್ರರಂಗದ ಜನಪ್ರಿಯ ಸ್ಟಾರ್ ನಟರ ಪಿಆರ್ ಹ್ಯಾಂಡಲ್ ಮಾಡುವುದಾಗಿ ಹೇಳಿಕೊಂಡಿದ್ದ ಎಂದಿದ್ದಾರೆ.

ಈ ವ್ಯಕ್ತಿ ವಿಷ. ಚಿತ್ರರಂಗದಲ್ಲಿ ನನ್ನ ಬಗ್ಗೆ ಹಲವು ಗಾಸಿಪ್​ಗಳನ್ನು ಹರಿಯಬಿಟ್ಟಿದ್ದಾನೆ. ಇದರಿಂದಾಗಿ ನನ್ನ ವೃತ್ತಿ ಜೀವನ ಹಾಗೂ ಖಾಸಗಿ ಜೀವನ ಸಮಸ್ಯೆಗೆ ಸಿಲುಕಿದೆ. ಈ ವ್ಯಕ್ತಿಯಿಂದಾಗಿ ನಾನು ಕೆಲವು ಗೆಳೆಯರನ್ನು ಕಳೆದುಕೊಳ್ಳಬೇಕಾಯ್ತು, ನನ್ನ ಇಮೇಜು ಹಾಳಾಯ್ತು, ಕೆಲವು ಸಿನಿಮಾಗಳು ಸಹ ನನ್ನ ಕೈತಪ್ಪಿದವು’ ಎಂದಿದ್ದಾರೆ ಉನ್ನಿ ಮುಕುಂದನ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!