ರಾಹುಲ್ ಗಾಂಧಿ ಮುಖಕ್ಕೆ ಕಪ್ಪು ಮಸಿ ಬಳಿಯುತ್ತೇನೆ: ಮಿತ್ರಪಕ್ಷದಿಂದಲೇ ಕಾಂಗ್ರೆಸ್ ನಾಯಕನಿಗೆ ಎಚ್ಚರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾವರ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಾಗಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಮುಖಕ್ಕೆ ಕಪ್ಪು ಮಸಿ ಬಳಿಯುವುದಾಗಿ ಶಿವಸೇನೆ (ಯುಬಿಟಿ) ಸ್ಥಳೀಯ ಮುಖಂಡರೊಬ್ಬರು ಬುಧವಾರ ಎಚ್ಚರಿಕೆ ನೀಡಿದ್ದಾರೆ.

ಇತ್ತ ಶಿವಸೇನಾ(UBT) MVA ಯಲ್ಲಿ ಕಾಂಗ್ರೆಸ್‌ನ ಮಿತ್ರ ಪಕ್ಷವಾಗಿದೆ ಹೀಗಾಗಿ ನಾಸಿಕ್ ನ ಉದ್ಧವ್ ಠಾಕ್ರೆ ಪಕ್ಷದ ನಗರ ಘಟಕದ ಉಪಾಧ್ಯಕ್ಷ ಬಾಲಾ ದಾರಾಡೆ ಅವರ ಹೇಳಿಕೆಯು ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ (MVA)ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಸಾವರ್ಕರ್ ಅವರ ಜನ್ಮ ದಿನದಂದು ಮರಾಠಿ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ ದಾರಾಡೆ, ಸ್ವಾತಂತ್ರ್ಯ ಹೋರಾಟಗಾರ, ವೀರ ಸಾವರ್ಕರ್ ಹುಟ್ಟಿದ ಸ್ಥಳದಲ್ಲಿ ನಾವು ವಾಸಿಸುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ. ರಾಹುಲ್ ಗಾಂಧಿ ಅವರು ಸಾವರ್ಕರ್ ಅವರನ್ನು ಮಾಫಿ-ವೀರ್ ಎಂದು ಕರೆದಿರುವುದು ಅವಮಾನಕರವಾಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ನಾಸಿಕ್‌ಗೆ ಬಂದರೆ ರಾಹುಲ್ ಗಾಂಧಿ ಅವರ ಮುಖಕ್ಕೆ ಕಪ್ಪು ಮಸಿ ಬಳಿಯುತ್ತೇವೆ. ಅದು ಸಾಧ್ಯವಾಗದಿದ್ದರೆ ಅವರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಶಿವಸೇನಾ(UBT) MVA ಯಲ್ಲಿ ಕಾಂಗ್ರೆಸ್‌ನ ಮಿತ್ರ ಪಕ್ಷ. ವಿರೋಧ ಪಕ್ಷದ ಎದುರಾಗುವ ಯಾವುದೇ ಬೆದರಿಕೆ ಹೆದರಿಸಲು ಸಿದ್ದನಿದ್ದೇನೆ. ಸಾವರ್ಕರ್ ವಿರುದ್ಧ ಯಾರಾದರೂ ನಿಂದನೀಯ ಪದಗಳನ್ನು ಬಳಸುವುದನ್ನು ನಾವು ಸಹಿಸುವುದಿಲ್ಲ. ಮಹಾ ವಿಕಾಸ್ ಅಘಾಡಿಯ ಭವಿಷ್ಯ ಏನಾಗಲಿ, ಸಾವರ್ಕರ್ ಅವರನ್ನು ಅವಮಾನಿಸುವುದನ್ನು ನಾವು ಸಹಿಸುವುದಿಲ್ಲ ಎಂದು ಅವರು ಹೇಳಿದರು.

ಇನ್ನು ದಾರಾಡೆ ಹೇಳಿಯಿಂದ ಶಿವಸೇನಾ (UBT) ದೂರು ಉಳಿದಿದ್ದು, ದಾರಾಡೆ ಅಭಿಪ್ರಾಯಗಳು ಅವರದೇ ಹೊರತು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ಅಧಿಕೃತ ನಿಲುವಲ್ಲ ಎಂದು ಶಿವಸೇನಾ (UBT) ವಕ್ತಾರ ಸುಷ್ಮಾ ಅಂಧಾರೆ ತಿಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!