ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್ ಅವರು ಟಾಟಾ ಕೆಮಿಕಲ್ಸ್ ಸಂಸ್ಥೆಯ ನಿರ್ದೇಶಕ ಮತ್ತು ಚೇರ್ಮನ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೇ 29ಕ್ಕೆ ಆ ಸ್ಥಾನದಿಂದ ಹೊರಬರಲಿದ್ದಾರೆ. ಕಂಪನಿಯ ನಿರ್ದೇಶಕರ ಮಂಡಳಿಯು ರಾಜೀನಾಮೆ ವಿಚಾರವನ್ನು ಖಚಿತಪಡಿಸಿದೆ.
ಎನ್ ಚಂದ್ರಶೇಖರನ್ ನಿರ್ಗಮನವಾಗುತ್ತಿರುವಂತೆಯೇ, ಟಾಟಾ ಕೆಮಿಕಲ್ಸ್ ಸಂಸ್ಥೆಯ ನೂತನ ಚೇರ್ಮನ್ ಆಗಿ ಎಸ್ ಪದ್ಮನಾಭನ್ ಅವರನ್ನು ನೇಮಕ ಮಾಡಲಾಗಿದೆ. ಮೇ 30ರಿಂದ ನೂತನ ಚೇರ್ಮನ್ ಆಗಿ ಎಸ್ ಪದ್ಮನಾಭನ್ ಅಧಿಕಾರ ಪಡೆಯಲಿದ್ದಾರೆ.
ಸದ್ಯ ಟಾಟಾ ಕೆಮಿಕಲ್ಸ್ ನಿರ್ದೇಶಕರ ಮಂಡಳಿಯಲ್ಲಿ ಸದಸ್ಯರಾಗಿರುವ ಎಸ್ ಪದ್ಮನಾಭನ್ ಮೇ 30ರಂದು ಬೋರ್ಡ್ ಮುಖ್ಯಸ್ಥರಾಗಲಿದ್ದಾರೆ. ಟಾಟಾ ಕೆಮಿಕಲ್ಸ್ ಸಂಸ್ಥೆಯ ಚೇರ್ಮನ್ ಆಗಲಿದ್ದಾರೆ.