ಜಮ್ಮು ಕಾಶ್ಮೀರದಲ್ಲಿ ಮೂರು ಸಜೀವ ಮೋರ್ಟಾರ್​ ಶೆಲ್​ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ನರ್ವಾಲ್​ ಪ್ರದೇಶದಲ್ಲಿ ಮೂರು ಸಜೀವ ಮೋರ್ಟಾರ್​ ಶೆಲ್​ಗಳು ಪತ್ತೆಯಾಗಿದ್ದು, ಬಾಂಬ್​ ನಿಷ್ಕ್ರಿಯ ದಳ ವಿಫಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನರ್ವಾಲ್​ ಪೊಲೀಸ್​ ಪೋಸ್ಟ್​ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ, ನರ್ವಾಲ್ನಲ್ಲಿರುವ ಪ್ರಾದೇಶಿಕ ಸಾರಿಗೆ ಸಂಸ್ಥೆ (ಆರ್ ಟಿಒ) ಎದುರಿನ ಬೇಲಿಯಲ್ಲಿ ಈ ಶೆಲ್​ಗಳು ಪತ್ತೆಯಾಗಿದ್ದವು. ಆ ಮೂರು ಶೆಲ್​ಗಳನ್ನು ಬಾಂಬ್​ ನಿಷ್ಕ್ರಿಯ ತಂಡ ತೆರವುಗೊಳಿಸಿತು ಎಂದು ಮಾಹಿತಿ ನೀಡಿದರು.

ಕಳೆದ ಏಪ್ರಿಲ್​ ತಿಂಗಳ 22 ರಂದು ಪಹಲ್ಗಾಮ್​ ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿ ಬಳಿಕ ಜಮ್ಮುದಲ್ಲಿ ಪಾಕಿಸ್ತಾನ್​ ಸೇನೆಯಿಂದ ಇದೇ ರೀತಿಯ ಮೋರ್ಟಾರ್​ ಶೆಲ್​ಗಳು ಮತ್ತು ಡ್ರೋನ್ ದಾಳಿ ಮುಂದುವರಿದಿತ್ತು. ಈ ಎಲ್ಲಾ ಘಟನೆಗಳಿಂದ ಕೆರಳಿದ ಭಾರತವು ಪಾಕಿಸ್ತಾನದಲ್ಲಿನ ಉಗ್ರರ ಸಂಹಾರಕ್ಕೆ ಆಪರೇಷನ್​ ಸಿಂಧೂರ್​ ಮೂಲಕ ತಕ್ಕ ಶಾಸ್ತಿ ಮಾಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!