ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳಿನಿಂದಲೇ ಕನ್ನಡ ಜನಿಸಿದೆ ಎಂದು ಕಮಲ್ ಹಾಸನ್ ನೀಡಿರುವ ಹೇಳಿಕೆಗೆ ಈಗಾಗಲೇ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿದ್ದಾರೆ.
‘ಕಮಲ್ ಹಾಸನ್ ಅದ್ಭುತ ನಟರು ಆದರೆ ಅವರಿಗೆ ಭಾಷಾ ಜ್ಞಾನ ಇದ್ದಂತಿಲ್ಲ. ತಮಿಳು ಕನ್ನಡದ ತಾಯಿ ಭಾಷೆ ಅಲ್ಲ, ಸೋದರ ಭಾಷೆ. ಕಮಲ್ ಹಾಸನ್ ಆಡಿರುವುದು ತುಟಿ ಮೀರಿದ ಮಾತೋ ಉನ್ಮಾದದ ಮಾತೋ ಗೊತ್ತಿಲ್ಲ ಅದನ್ನ ಸರಿ ಪಡಿಸಿಕೊಳ್ಳಬೇಕಿದೆ. ಅವರು ಮಾತನಾಡಿರೋದು ನೋವಾಗಿದೆ” ಎಂದು ಹೇಳಿದ್ದಾರೆ.