ಮೇಷ
ಹೆಚ್ಚು ಕೆಲಸ, ಹೆಚ್ಚು ಒತ್ತಡ. ಹಾಗೆಂದು ಕೆಲಸದ ಮೇಲಿನ ಏಕಾಗ್ರತೆ ಕಳಕೊಳ್ಳದಿರಿ. ಆತ್ಮೀಯರ ಜತೆ ಸಂವಹನದ ಕೊರತೆ, ಭಿನ್ನಮತ.
ವೃಷಭ
ಪ್ರೀತಿಪಾತ್ರರ ಜತೆ ಅಭಿಪ್ರಾಯ ಭೇದ. ಅವರ ವರ್ತನೆಯಿಂದ ಮನಸ್ಸಿಗೆ ನೋವು. ನಿಮ್ಮ ನಡೆನುಡಿಯಲ್ಲಿ ಸಂಯಮವಿರಲಿ.
ಮಿಥುನ
ನಿಮ್ಮ ಗುರಿ ಸಾಧಿಸಲು ಕಾಲ ಪಕ್ವವಾಗಿದೆ. ಇನ್ನೂ ಮೀನಮೇಷ ಎಣಿಸದಿರಿ. ಕೌಟುಂಬಿಕ ಸಹಕಾರ. ವೃತ್ತಿಯಲ್ಲಿ ಏಳಿಗೆ.
ಕಟಕ
ಸಂಬಂಧದ ವಿಚಾರ
ದಲ್ಲಿ ನಾಜೂಕಿನಿಂದ ನಡಕೊಳ್ಳಿ. ತಪ್ಪಾದ ಮಾತಿನಿಂದ ಬಂಧುತ್ವ ಹಾಳಾದೀತು. ಟೀಕೆಗೆ ಅವಕಾಶ ನೀಡದಿರಿ. ಸಿಂಹ
ಹಣದ ವಿಚಾರದಲ್ಲಿ ಜಾಗರೂತೆಯಿರಲಿ. ನಷ್ಟದ ಅಥವಾ ಅತಿವ್ಯಯದ ಸಾಧ್ಯತೆಯಿದೆ. ದಿನವಿಡೀ ಒತ್ತಡದ ಕೆಲಸ. ಸಂಜೆ ದೈಹಿಕ ಬಳಲಿಕೆ.
ಕನ್ಯಾ
ಸಣ್ಣ ವಿಷಯಕ್ಕೆ ಕಲಹವಾದೀತು. ಯಾವುದಕ್ಕೂ ಅತಿರೇಕದಿಂದ ಪ್ರತಿಕ್ರಿಯೆ ತೋರದಿರಿ. ಮನಸಿನ ನಿಯಂತ್ರಣ ಅವಶ್ಯ.
ತುಲಾ
ಆಪ್ತರ ಬಗ್ಗೆ ಅತಿ ವಿಶ್ವಾಸ ಒಳಿತಲ್ಲ. ನಿಮ್ಮ ಎಚ್ಚರದಲ್ಲಿ ಇರಬೇಕು. ಕೆಲ ವಿಷಯಗಳಲ್ಲಿ ನಿಮ್ಮ
ಅಭಿಪ್ರಾಯ ಬಹಿರಂಗ ಮಾಡಬೇಡಿ.
ವೃಶ್ಚಿಕ
ನಿಮ್ಮ ಮನಸ್ಸಿನ ಭಾವನೆ ವ್ಯಕ್ತಪಡಿಸಲು ಹಿಂಜರಿಕೆ ಬೇಡ. ಸಕಾರಾತ್ಮಕ ಸ್ಪಂದನೆ ಲಭ್ಯ. ಆರ್ಥಿಕವಾಗಿ ಪೂರಕ ದಿನ. ಕಾರ್ಯಸಿದ್ಧಿ.
ಧನು
ಬಂಧುಗಳ ಜತೆಗಿನ ನಿಮ್ಮ ಸಂಬಂಧ ಹಾಳು ಮಾಡಲು ಕೆಲವರು ಯತ್ನಿಸುವರು. ಅದಕ್ಕೆ ಅವಕಾಶ ನೀಡದಿರಿ. ನಿಮ್ಮ ನಿಲುವು ಗಟ್ಟಿಯಾಗಿರಲಿ.
ಮಕರ
ಇತರರ ಕಾರ್ಯ ನೀವು ನಿಭಾಯಿಸುವ ಹೊಣೆ ಬಿದ್ದೀತು. ಜತೆಗೇ ಟೀಕೆಯನ್ನೂ ಎದುರಿಸುವಿರಿ. ಆದಾಯ ಹೆಚ್ಚಳ, ಜತೆಗೇ ಖರ್ಚೂ.
ಕುಂಭ
ಮನಸ್ಸಿನಲ್ಲಿ ಉದಾಸ ಭಾವ. ಯಾವುದೇ ವಿಷಯ ಮುದ ನೀಡದು. ಆರೋಗ್ಯದ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಬೇಡ, ತಪಾಸಣೆ ನಡೆಸಿ.
ಮೀನ
ಮನದಲ್ಲಿ ಏನೋ ಕೊರಗು. ಭಾವನಾತ್ಮಕ ಏರುಪೇರು. ಆತ್ಮೀಯರ ನೆನಪು ಕಾಡಲಿದೆ. ಆರೋಗ್ಯಕರ ಆಹಾರ ಸೇವಿಸಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ