ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೆನ್ನೈನಲ್ಲಿ ನಡೆದ ಇವೆಂಟ್ನಲ್ಲಿ ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಎಂಬ ವಿವಿವಾದಾತ್ಮಕ ಹೇಳಿಕೆ ನೀಡಿದ್ದ ಕಮಲ್ ಹಾಸನ್ ವಿರುದ್ಧ ಆರೋಪ,ಆಕ್ಷೇಪಗಳು ಕೇಳಿ ಬಂದಿತ್ತು. ನಟನ ಈ ಹೇಳಿಕೆಗೆ ಕನ್ನಡದ ನಟಜಗ್ಗೇಶ್ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕೂಡ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
ಇದೇ ವಿಚಾರಕ್ಕೆ ಈಗ ಹಿರಿಯ ನಟ ಶ್ರೀನಾಥ್ ಅವರು ಕೂಡ ವಿರೋಧ ವ್ಯಕ್ತಪಡಿಸಿ ಮಾತನಾಡಿದ್ದಾರೆ.
ಕನ್ನಡ ಎಲ್ಲಿಂದಲೂ ಹುಟ್ಟಬೇಕಾಗಿಲ್ಲ, ಅದು ಎಲ್ಲಿಂದ ಹುಟ್ಟಬೇಕೋ ಅಲ್ಲಿಂದ ಹುಟ್ಟಿದೆ. ಬೇಕಾದಷ್ಟು ಭಾಷೆನ ಬೆಳಸಿದೆ ಕನ್ನಡ. ಅದು ಎಲ್ಲಿಂದ ಹುಟ್ಟಿತ್ತು ಎಂಬುದು ಕನ್ನಡಿಗರಿಗೆ ಗೊತ್ತಿದೆ, ಅದನ್ನು ಬೇರೆಯವರಿಂದ ತಿಳ್ಕೊಬೇಕಾಗಿಲ್ಲ. ಯಾವ ವ್ಯಕ್ತಿನೂ ‘ನಾನು ಗ್ರೇಟ್’ ಅಂದ್ಕೋಬಾರ್ದು, ‘ನಾವು’ ಅಂತ ಅಂದ್ಕೋಬೇಕು. ನನ್ನ ಭಾಷೆ ಬಗ್ಗೆ ನನಗೆ ಹೆಮ್ಮೆ ಇದೆ, ನಮ್ಮ ಭಾಷೆ ಬಗ್ಗೆ ಯಾರೋ ಬೇರೆಯವರು ಬಂದು ಹೇಳಬೇಕಾಗಿಲ್ಲ, ನಮ್ಮ ಭಾಷೆ ಬಗ್ಗೆ ನಮಗೆ ಗೊತ್ತಿದೆ’ ಎಂದಿದ್ದಾರೆ.
ತಮಿಳಿಂದ ಹುಟ್ಟಿದೆ ಅನ್ನೊದಾದ್ರೆ ಎಲ್ಲಾ ತಮಿಳರಿಗೂ ಕನ್ನಡ ಬರಬೇಕಾಗಿತ್ತಲ್ಲ.