HAIR CARE | ಅದ್ಭುತ ಕೇಶರಾಶಿ ನಿಮ್ಮದಾಗಬೇಕಾ? ಹಾಗಾದ್ರೆ ಈ ಆಹಾರಗಳನ್ನು ಸೇವಿಸೋಕೆ ಮರಿಬೇಡಿ

ಇಂದಿನ ಒತ್ತಡದ ಜೀವನಶೈಲಿ, ಆಹಾರ ಸೇವನೆ ಹಾಗೂ ಮಾಲಿನ್ಯದ ಪರಿಣಾಮವಾಗಿ ಕೂದಲು ಉದುರುವಿಕೆ (Hair Fall) ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಈ ಸಮಸ್ಯೆಗೆ ಬೆಲೆಬಾಳುವ ಕ್ರೀಮ್‌ಗಳು ಅಥವಾ ಚಿಕಿತ್ಸೆಗಿಂತ ಹೆಚ್ಚಿನ ಪರಿಹಾರ ನೈಸರ್ಗಿಕ ಆಹಾರಗಳಲ್ಲಿಯೇ ಲಭ್ಯ. ತಜ್ಞರು ಸಲಹೆ ನೀಡುವ ಕೆಲ ನೈಸರ್ಗಿಕ ಆಹಾರಗಳ ಸೇವನೆಯಿಂದ ಕೂದಲಿಗೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡಬಹುದು, ಇದು ಕೂದಲನ್ನು ಬಲಪಡಿಸಿ ಉದುರುವಿಕೆಯನ್ನು ತಡೆಯುತ್ತದೆ.

ಅಗಸೆ ಬೀಜ (Flax Seeds):
ಓಮೇಗಾ-3 ಫ್ಯಾಟಿ ಆಸಿಡ್ ಗಳಲ್ಲಿ ಶ್ರೀಮಂತವಾದ ಅಗಸೆ ಬೀಜಗಳು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ ಮತ್ತು ಒಣಗಿದ ತ್ವಚೆಗೆ ತೇವಾಂಶ ನೀಡುತ್ತವೆ.

Flaxseed and weight loss: Can it help?

ನೆಲ್ಲಿಕಾಯಿ (Amla):
ವಿಟಮಿನ್ C ಯಿಂದ ತುಂಬಿರುವ ನೆಲ್ಲಿಕಾಯಿ ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಕೂದಲು ಬೆಳವಣಿಗೆ ವೇಗವಾಗುತ್ತದೆ.

इन 5 लोगों को भूलकर भी नहीं खाना चाहिए आंवला, बन सकता है मुसीबत की जड़, पड़ेगा पछताना | 5 People Who Should Not Have Amla (gooseberry) | Amla khane ke niksan |

ಸೊಪ್ಪು ಮತ್ತು ಹಸಿರು ತರಕಾರಿಗಳು:
ಪಾಲಕ್ ಸೊಪ್ಪು, ಮೆಂತ್ಯೆ ಸೊಪ್ಪು ಇತ್ಯಾದಿ ಸೊಪ್ಪುಗಳು, ವಿಟಮಿನ್‌ಗಳನ್ನು ಒಳಗೊಂಡಿದ್ದು, ಕೂದಲಿಗೆ ಬೇಕಾದ ಪೋಷಕಾಂಶವನ್ನು ಒದಗಿಸುತ್ತವೆ.

Top 10 leafy veggies to boost your health – Ugaoo

ಮೊಸರು (Curd/Yogurt):
ಪ್ರೊಬಯೋಟಿಕ್ಸ್ ಮತ್ತು ಪ್ರೋಟೀನ್‌ಗಳಿಂದ ಸಮೃದ್ಧವಾಗಿರುವ ಮೊಸರು ತ್ವಚೆಯ ಆರೋಗ್ಯ ಉಳಿಸಿ ಕೂದಲು ಬಲಪಡಿಸಲು ಸಹಕಾರಿಯಾಗುತ್ತದೆ.

How To Make Homemade Yogurt - Curd

ಬಾದಾಮಿ ಮತ್ತು ಬೀಜಗಳು (Nuts & Seeds):
ಬಾದಾಮಿ, ವಾಲ್‌ನಟ್‌, ಬೀನ್ಸ್ ಇತ್ಯಾದಿಗಳು ಬಯೋಟಿನ್‌, ವಿಟಮಿನ್ E ಹಾಗೂ ಝಿಂಕ್ ನ ಉತ್ತಮ ಮೂಲ. ಇವು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತವೆ.

6 desi nuts and seeds that boost protein intake without effort

ಮೆಂತ್ಯ:
ಮೆಂತ್ಯ ಬೀಜಗಳು ಬಹಳಷ್ಟು ಪ್ರೋಟೀನ್, ವಿಟಮಿನ್ ಎ, ಕೆ, ಸಿ ಮತ್ತು ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳನ್ನು ಹೊಂದಿರುತ್ತವೆ. ಇವು ಕೂದಲು ಉದುರುವುದನ್ನು ನಿಲ್ಲಿಸಿ ಕೂದಲನ್ನು ಬಲಪಡಿಸುತ್ತವೆ.

 

amazing benefits of eating methi seeds fenugreek | ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ಬೀಜ ಸೇವಿಸಿ : ಇದರಿಂದ ರೋಗಗಳು ಹತ್ತಿರವು ಸುಳಿಯುವುದಿಲ್ಲ Health News in Kannada

ದಾಳಿಂಬೆ:
ವಿಟಮಿನ್ ಸಿ, ಕೆ, ಫೈಬರ್, ಪೊಟ್ಯಾಸಿಯಮ್ ಮತ್ತು ಪ್ರೋಟೀನ್‌ಗಳಿಂದ ಸಮೃದ್ಧವಾಗಿರುವ ದಾಳಿಂಬೆ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ ಮತ್ತು ರಕ್ತದಲ್ಲಿ ಕಬ್ಬಿಣದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ದಾಳಿಂಬೆ ಹಣ್ಣಿನಲ್ಲಿ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ...

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!