ಮೇಷ
ವೃತ್ತಿಯಲ್ಲಿ ಏಳಿಗೆ. ದಕ್ಷತೆಯಿಂದ ಕಾರ್ಯ ನಿರ್ವಹಣೆ. ವೇತನ ಏರಿಕೆಯಾದೀತು. ಕೌಟುಂಬಿಕ ಹೊಂದಾಣಿಕೆ, ಸೌಹಾರ್ದ ವಾತಾವರಣ.
ವೃಷಭ
ನಿಮ್ಮ ಕಾರ್ಯಕ್ಕೆ ಮೆಚ್ಚುಗೆ. ಹಣ ಗಳಿಕೆಯ ಹಾದಿ ಸುಗಮ. ಕೌಟುಂಬಿಕ ಸಮ್ಮಿಲನ. ಆಪ್ತರಿಂದ ಶುಭ ಸುದ್ದಿ. ಆರೋಗ್ಯ ಸುಸ್ಥಿರ.
ಮಿಥುನ
ನಿಮ್ಮ ಉತ್ಸಾಹ ಕುಂದಿಸುವ ವ್ಯಕ್ತಿಗಳಿಂದ ದೂರವಿರಿ. ಅಽಕ ಕೆಲಸದ ಹೊರೆ. ಕಾರ್ಯ ವಿಳಂಬ. ಆಪ್ತರ ಜತೆ ಕಪಟ ಬೇಡ, ಪ್ರಾಮಾಣಿಕತೆಯಿರಲಿ.
ಕಟಕ
ಸವಾಲಿನ ದಿನ. ಪ್ರಗತಿ ನಿಧಾನವಾದೀತು. ಆಪ್ತರ ಸಂಗದಲ್ಲಿ ನಿರಾಳತೆ. ಆರೋಗ್ಯದ ಕುರಿತು ಎಚ್ಚರ ವಹಿಸಿರಿ.
ಸಿಂಹ
ಕೆಲಸದಲ್ಲಿ ತಪ್ಪು ಎಸಗಬೇಡಿ. ಮೇಲಿನವರ ಕಣ್ಣು ನಿಮ್ಮ ಮೇಲಿದೆ. ಸಂಸಾರದಲ್ಲಿ ಮೂಡಿದ್ದ ಅಪಸ್ವರ ನಿವಾರಣೆ. ಎಲ್ಲವೂ ಸುಲಲಿತ.
ಕನ್ಯಾ
ಗೊಂದಲದ ಮನಸ್ಥಿತಿ. ಕೆಲ ವಿಚಾರ ಗಳಲ್ಲಿ ಸ್ಪಷ್ಟ ನಿಲುವು ಅವಶ್ಯ. ಆರ್ಥಿಕ ಸ್ಥಿತಿ ಅತೃಪ್ತಿ ತರಲಿದೆ. ಕಾಲು ನೋವು ಬಾಽಸೀತು. ಒತ್ತಡ ಕಡಿಮೆ ಮಾಡಿಕೊಳ್ಳಿ.
ತುಲಾ
ಎಲ್ಲ ಕೆಲಸ ಇಂದೇ ಮುಗಿಸುವ ಯೋಚನೆ ನಿಮ್ಮದು. ಅದರಿಂದ ಹತಾಶೆ ಕಾಡಬಹುದು. ಕಾರ್ಯದ ಒತ್ತಡದಿಂದ ದೈಹಿಕ ಬಳಲಿಕೆ.
ವೃಶ್ಚಿಕ
ನಿಮ್ಮ ಭಾವನೆ ವ್ಯಕ್ತಪಡಿಸಲು ಹಿಂಜರಿಕೆ ಬೇಕಿಲ್ಲ. ಪೂರಕ ಸ್ಪಂದನೆ ದೊರಕುವುದು. ಉದ್ಯೋಗದಲ್ಲಿ ನಿರ್ವಹಣೆ ಕುಂಠಿತ.
ಧನು
ವ್ಯವಹಾರದಲ್ಲಿ ಉನ್ನತಿ. ಆರ್ಥಿಕ ಪ್ರಗತಿ. ಹಿರಿಯರ ಜತೆ ವಾಗ್ವಾದ ನಡೆದೀತು. ಮಾತಿಗೆ ಮಾತು ಕೂಡಿಸದಿರಿ. ಮೌನ ಒಳ್ಳೆಯದು.
ಮಕರ
ನಿಮ್ಮ ಕಾರ್ಯದಲ್ಲಿ ನಿಮಗೇ ನಿರುತ್ಸಾಹ. ಗ್ರಹಗತಿ ನಿಮಗೆ ಪೂರಕವಲ್ಲ. ಹಣದ ಮೇಲೆ ಅದು ಪರಿಣಾಮ ಬೀರಬಹುದು.
ಕುಂಭ
ಗ್ರಹಗತಿ ನಿಮಗೆ ಅನುಕೂಲವಾಗಿದೆ. ಉದ್ದೇಶ ಈಡೇರಿಕೆ. ಮುಖದಲ್ಲಿ ನಗುವಿರಲಿ, ಎಲ್ಲವೂ ನಿಮ್ಮ ಪರವಾಗಿ ಬದಲಾಗಲಿದೆ.
ಮೀನ
ಸಂಗಾತಿ ಜತೆಗೆ ವಾಗ್ವಾದ ಸಂಭವ. ಧನಹಾನಿ ಸಾಧ್ಯತೆ. ಆರೋಗ್ಯ ಸ್ಥಿತಿ ಕಡೆಗಣಿಸಬೇಡಿ. ವೈದ್ಯರನ್ನು ಕಾಣಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ