ಈ ಬಾರಿ ಕಪ್‌ ನಮ್ದಾಗಿಬಿಟ್ರೆ ಆ ದಿನವನ್ನು ʼಆರ್‌ಸಿಬಿ ಫ್ಯಾನ್ಸ್‌ ಹಬ್ಬʼ ಎಂದು ಘೋಷಣೆ ಮಾಡಿ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಂಜಾಬ್‌ ಕಿಂಗ್ಸ್‌ ವಿರುದ್ಧ ಕ್ವಾಲಿಫೈಯರ್‌-1ನಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 4ನೇ ಬಾರಿ ಫೈನಲ್‌ಗೆ ಲಗ್ಗೆಯಿಟ್ಟಿದೆ.

Building Brand Loyalty in Sports: Insights from Royal Challengers Bangalore  (RCB) in the IPL 2009, 2011, 2016ರ ಬಳಿಕ ನಾಲ್ಕನೇ ಬಾರಿ ಐಪಿಎಲ್‌ ಫೈನಲ್‌ ತಲುಪಿದ್ದು, ಟ್ರೋಫಿ ಗೆಲ್ಲುವ ನಿರೀಕ್ಷೆ ಮೂಡಿಸಿದೆ. ಇದು ಆರ್‌ಸಿಬಿ ಅಭಿಮಾನಿಗಳ ಥ್ರಿಲ್‌ಗೆ ಕಾರಣವಾಗಿದ್ದು, ಈ ಬಾರಿ ಟ್ರೋಫಿ ನಮ್ದೇ ಎಂದು ಹೇಳುತ್ತಿದ್ದಾರೆ. ಅಂತೆಯೇ ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ಬರೆದು ಬೇಡಿಕೆಯೊಂದನ್ನು ಇಟ್ಟಿದ್ದಾರೆ.

ಈ ಬಾರಿ ಕಪ್‌ ನಮ್ದು ಎಂದಾದರೆ ಆರ್‌ಸಿಬಿ ಫೈನಲ್ಸ್‌ ಗೆದ್ದ ದಿನವನ್ನು ಆರ್‌ಸಿಬಿ ಫ್ಯಾನ್ಸ್‌ ಹಬ್ಬ ಎಂದು ಘೋಷಣೆ ಮಾಡಿ ಎಂದು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ದಿನ ಆರ್‌ಸಿಬಿಯನ್ನು ಸಂಭ್ರಮಿಸೋದಕ್ಕೆ ರಜೆ ಘೋಷಣೆ ಮಾಡಬೇಕು ಎಂದು ಸಹ ಹೇಳಿದ್ದಾರೆ.

Fans want RCB to win IPL': Faf du Plessis admits ahead of Royal Challengers  Bengaluru vs Sunrisers Hyderabad encounter | Cricket News - Times of Indiaಗೋಕಾಕ ಮೂಲದ ಯುವಕ ಶಿವಾನಂದ ಮಲ್ಲನ್ನವರ್ ಎಂಬ ಯುವಕ ಸಿಎಂಗೆ ಪತ್ರ ಬರೆದಿದ್ದು ರಾಜ್ಯೋತ್ಸವದ ರೀತಿಯಲ್ಲಿ ಆರ್‌ಸಿಬಿ ಫ್ಯಾನ್ಸ್ ಹಬ್ಬದ ರೀತಿಯಲ್ಲಿ ಆಚರಣೆಗೆ ಅವಕಾಶ ನೀಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಈ ಪತ್ರ ಸೋಷಿಯಲ್‌ ಮೀಡಿಯಾದಲ್ಲೂ ವೈರಲ್‌ ಆಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!