ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಮೇಕಿಂಗ್‌ಗೆ ಈ ಕನ್ನಡದ ನಟನೇ ಸ್ಪೂರ್ತಿಯಂತೆ! ಹೌದು, ಪುಷ್ಪ ನಿರ್ದೇಶಕ ಸುಕುಮಾರ್ ಕನ್ನಡದ ನಟನೇ ಈ ಸಿನಿಮಾ ಮಾಡೋದಕ್ಕೆ ಸ್ಪೂರ್ತಿ ಎಂದು ಹೇಳಿದ್ದಾರೆ.
ಆ ನಟ ಬೇರ್ಯಾರೂ ಅಲ್ಲ ರಿಯಲ್ ಸ್ಟಾರ್ ಉಪೇಂದ್ರ! ಹೌದು, ಅರ್ಜುನ್ ಸರ್ಜಾ ನಿರ್ದೇಶನದ ‘ಸೀತಾ ಪಯಣಂ’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಸುಕುಮಾರ್ ಮತ್ತು ಉಪೇಂದ್ರ ಅತಿಥಿಗಳಾಗಿ ಭಾಗಿಯಾಗಿದ್ದರು. ಈ ವೇಳೆ ಸುಕುಮಾರ್ ಮಾತನಾಡಿ, ಉಪೇಂದ್ರ ಅವರು ತಮ್ಮ ಚಿತ್ರಗಳಲ್ಲಿ ತರುವ ಮ್ಯಾಡ್‌ನೆಸ್ ಅನ್ನು ನಾನು ಯಾವುದೇ ನಿರ್ದೇಶಕರಲ್ಲಿ ನೋಡಿಲ್ಲ. ನಾನು ಕೂಡ ಅವರಂತೆ ನಿರ್ದೇಶಿಸಿದ್ದರೆ ಖುಷಿಯಿಂದ ನಿವೃತ್ತಿ ಹೊಂದುತ್ತಿದ್ದೆ ಎಂದಿದ್ದಾರೆ.
‘ಪುಷ್ಪ’ ಅಥವಾ ನನ್ನ ಇತರೆ ಸಿನಿಮಾಗಳ ಚಿತ್ರಕಥೆ ಚೆನ್ನಾಗಿದೆ ಎಂದರೆ ಅದಕ್ಕೆ ಉಪ್ಪಿ ಸಿನಿಮಾಗಳೇ ಪ್ರೇರಣೆ. ಅದನ್ನು ಯಾವುದೇ ಸಂಕೋಚವಿಲ್ಲದೇ ಹೇಳುತ್ತೇನೆ ಎಂದು ಉಪೇಂದ್ರ ಕುರಿತು ಸುಕುಮಾರ್ ಹೊಗಳಿದ್ದಾರೆ. ನಿರ್ದೇಶಕನ ಮಾತು ಉಪ್ಪಿ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.