ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಯಿಂದ ಗುಡ್ಡ ಕುಸಿದು ಮಂಗಳೂರಲ್ಲಿ ಒಂದೇ ಕುಟುಂಬದ ಮೂವರು ಜೀವ ಬಿಟ್ಟಿದ್ದಾರೆ.
ಉಳ್ಳಾಲದ ದೇರಳಕಟ್ಟೆ ಮೊಂಟೆಪದವಿನ ಪಂಬದ ಹಿತ್ಲುವಿನಲ್ಲಿ ಘೋರ ದುರಂತದಲ್ಲಿ ಮನೆ ಮೇಲೆ ಗುಡ್ಡ ಕುಸಿದ ಪರಿಣಾಮ ಐವರಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದುರಂತದಲ್ಲಿ ಕಾಂತಪ್ಪ ಎಂಬವರ ಪತ್ನಿ ಪ್ರೇಮಾ ಪೂಜಾರಿ, ಆರ್ಯನ್, ಆರುಷ್ ಮೃತಪಟ್ಟಿದ್ದಾರೆ. ಅಲ್ಲದೇ ಕಾಂತಪ್ಪ ಪೂಜಾರಿ ಅವರಿಗೆ ಕಾಲು ಕಟ್ ಆಗಿದ್ದು, ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಸೀತಾರಾಮ ಪೂಜಾರಿ ಅಶ್ವಿನಿ ಪೂಜಾರಿ ಎರಡೂ ಕಾಲಿಗೆ ಗಾಯಗಳಾಗಿದ್ದು ಸದ್ಯ ಅವರು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸತತವಾಗಿ 10 ಗಂಟೆಗಳ ಕಾಲ ಕಾರ್ಯಾಚರಣೆಯಲ್ಲಿ ಇಬ್ಬರು ಮಕ್ಕಳ ತಾಯಿ ಅಶ್ವಿನಿ ಹಾಗೂ ಕಾಂತಪ್ಪ ಪೂಜಾರಿ ಪಾರಾಗಿದ್ದಾರೆ.