ಗುಜರಾತ್‌ ವಿರುದ್ಧ ಭರ್ಜರಿ ಬ್ಯಾಟಿಂಗ್: ಐಪಿಎಲ್‌ನಲ್ಲಿ ಡಬಲ್ ದಾಖಲೆ ಬರೆದ ಹಿಟ್ ಮ್ಯಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಗುಜರಾತ್‌ ವಿರುದ್ಧದ ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ರೋಹಿತ್‌ ಶರ್ಮಾ ಐಪಿಎಲ್‌ ಇತಿಹಾಸದಲ್ಲಿ ಎರಡೆರಡು ದಾಖಲೆ ಬರೆದಿದ್ದಾರೆ.

ಗುಜರಾತ್ ವಿರುದ್ಧದ ಪಂದ್ಯದಲ್ಲಿ 2 ಸಿಕ್ಸರ್‌ಗಳನ್ನು ಬಾರಿಸಿದ ಹಿಟ್‌ಮ್ಯಾನ್ ಐಪಿಎಲ್‌ನಲ್ಲಿ 300 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ ಮೊದಲ ಸಕ್ರಿಯ ಆಟಗಾರ ಎನಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ವಿರಾಟ್ ಕೊಹ್ಲಿ 291 ಸಿಕ್ಸರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಧೋನಿ (264) ಮತ್ತು ಆಂಡ್ರೆ ರಸೆಲ್ (223) ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

ಅದೇ ರೀತಿ ರೋಹಿತ್ ಶರ್ಮಾ 7000 ರನ್ ಗಳಿಸಿದ್ದು, ಐಪಿಎಲ್‌ನಲ್ಲಿ (IPL 2025) ಅತಿ ಹೆಚ್ಚು ರನ್‌ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅತಿ ಹೆಚ್ಚು ರನ್‌ ಗಳಿಸಿದವರ ಸಾಲಿನಲ್ಲಿ ಆರ್‌ಸಿಬಿ ತಂಡದ ವಿರಾಟ್‌ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ರೋಹಿತ್, ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಪರ 271 ಪಂದ್ಯಗಳಲ್ಲಿ ಈ ರನ್ ಸಾಧನೆ ಮಾಡಿದ್ದಾರೆ. ಸರಾಸರಿ 30 ಕ್ಕಿಂತ ಕಡಿಮೆ, ಅತ್ಯಧಿಕ ಸ್ಕೋರ್ ಔಟಾಗದೆ 109 ರನ್‌ ಗಳಿಸಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿ ಬ್ಯಾಟರ್‌ಗಳು
ವಿರಾಟ್ ಕೊಹ್ಲಿ – 266 ಪಂದ್ಯಗಳಲ್ಲಿ 8618 ರನ್‌
ರೋಹಿತ್ ಶರ್ಮಾ – 271 ಪಂದ್ಯಗಳಲ್ಲಿ 7000 ರನ್‌
ಶಿಖರ್ ಧವನ್ – 222 ಪಂದ್ಯಗಳಲ್ಲಿ 6769 ರನ್
ಡೇವಿಡ್ ವಾರ್ನರ್ – 184 ಪಂದ್ಯಗಳಲ್ಲಿ 6565‌ ರನ್
ಸುರೇಶ್ ರೈನಾ – 205 ಪಂದ್ಯಗಳಲ್ಲಿ 5528‌ ರನ್

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!