ಮೇಷ
ಸಣ್ಣ ವಿಷಯಕ್ಕೂ ಭಾವುಕರಾಗುವಿರಿ. ಕೆಲವು ಸಂಬಂಧವನ್ನು ಅತಿಯಾಗಿ ಹಚ್ಚಿಕೊಳ್ಳದಿರಿ. ನಿರ್ಲಿಪ್ತ ಧೋರಣೆ ಒಳಿತು. ಆರ್ಥಿಕ ಒತ್ತಡ ಕಡಿಮೆ.
ವೃಷಭ
ಋಣಾತ್ಮಕ ಚಿಂತನೆ ದೂರ ಸರಿಸಿ. ಸಮಸ್ಯೆ ಇಲ್ಲದಿದ್ದರೂ ಸಮಸ್ಯೆ ಇರುವಂತೆ ವರ್ತಿಸುತ್ತೀರಿ. ವಾಗ್ವಾದದಲ್ಲಿ ಸಿಲುಕದಂತೆ ಎಚ್ಚರ ವಹಿಸಿರಿ.
ಮಿಥುನ
ಖಾಸಗಿ ಸಮಸ್ಯೆ ಪರಿಹರಿಸಲು ಗಮನ ಕೊಡಿ. ವಿಳಂಬ ಮಾಡಬೇಡಿ. ಕಿರಿಕಿರಿ ಸೃಷ್ಟಿಸುವವರನ್ನು ಹತ್ತಿರಕ್ಕೆ ಸೇರಿಸದಿರಿ.
ಕಟಕ
ಇಂದು ಏರುಪೇರು ಎದುರಿಸುವಿರಿ. ಹೊಣೆ ಹೆಚ್ಚಳ. ಅದನ್ನು ಸರಿಯಾಗಿ ನಿಭಾಯಿಸಲು ಕಷ್ಟ. ಇದರ ಮಧ್ಯೆಯೆ ಕೌಟುಂಬಿಕ ಸಮಾಧಾನ.
ಸಿಂಹ
ಕಾಡುತ್ತಿದ್ದ ಚಿಂತೆ ನಿವಾರಣೆ. ಇತರರ ಭಾವನೆ ಅರ್ಥ ಮಾಡಿಕೊಂಡು ಅವರ ಜತೆ ವ್ಯವಹರಿಸಿ. ಹೊಂದಾಣಿಕೆ ಒಳಿತು.
ಕನ್ಯಾ
ವೃತ್ತಿಯಲ್ಲಿ ಸವಾಲು ಎದುರಿಸುವಿರಿ. ತಪ್ಪು ಘಟಿಸದಂತೆ ಎಚ್ಚರ ವಹಿಸಿ. ನಯವಾಗಿ ಮಾತನಾಡಿ ವಂಚಿಸುವ ಜನರಿಂದ ದೂರವಿರಿ.
ತುಲಾ
ಪರಿಸ್ಥಿತಿಗೆ ತಕ್ಕಂತೆ ಕ್ಷಿಪ್ರ ನಿರ್ಧಾರ ತಾಳುವಲ್ಲಿ ಸಫಲರಾಗುವಿರಿ. ಪ್ರಮುಖ ಕೆಲಸ ಸರಾಗ. ವ್ಯವಹಾರದಲ್ಲಿ ತುಸು ಹಿನ್ನಡೆ ಸಂಭವ.
ವೃಶ್ಚಿಕ
ಬಾಕಿ ಉಳಿದಿರುವ ಕಾರ್ಯ ಮುಗಿಸಿ ನಿರಾಳರಾಗಿ. ಅದನ್ನು ಹಾಗೇ ಬಿಡಬೇಡಿ. ಸಾಂಸಾರಿಕ ಬಿಕ್ಕಟ್ಟು ನಿವಾರಣೆ, ಸಮಾಧಾನ.
ಧನು
ಹಣದ ವಿಚಾರದಲ್ಲಿ ಪ್ರತಿಕೂಲ ಬೆಳವಣಿಗೆ. ಆದಾಯ ಕಡಿಮೆ, ಖರ್ಚು ಅಽಕ. ಮನೆಯ ಕಾರ್ಯಕ್ಕೆ ತುರ್ತು ಗಮನಹರಿಸಿ.
ಮಕರ
ಕೆಲಸದಲ್ಲಿ ಒತ್ತಡ ಕಡಿಮೆ. ಇದರಿಂದ ಮನಸ್ಸಿಗೆ ನಿರಾಳತೆ. ಕೌಟುಂಬಿಕ ಕಾರ್ಯದಲ್ಲಿ ಭಿನ್ನಮತ. ವ್ಯವಹಾರದಲ್ಲಿ ಧನಲಾಭ.
ಕುಂಭ
ಇಂದು ಮನೆಯಲ್ಲಿ ಜವಾಬ್ದಾರಿ ಹೆಚ್ಚುವುದು. ಹಣಕ್ಕೆ ಸಂಬಂಽಸಿ ತೆಗೆದುಕೊಳ್ಳುವ ನಿರ್ಧಾರ ಉತ್ತಮ ಫಲ ನೀಡಲಿದೆ. ಆಪ್ತಬಂಧು ಭೇಟಿ.
ಮೀನ
ಕಾರ್ಯಗಳೆಲ್ಲ ಸುಗಮ. ಆದರೂ ಹೇಳಲಾಗದ ಅತೃಪ್ತಿ , ಅಸಹನೆ. ಬೇರಾವುದೋ ಭಾವನಾತ್ಮಕ ವಿಷಯ ಕಾಡುವುದು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ