ಡು ಆರ್​ ಡೈ ಪಂದ್ಯ: ಎಲಿಮಿನೇಟರ್​​ ನಿಂದ ಹೊರಬಿದ್ದ ಗುಜರಾತ್! ಕಪ್ ಗೆಲ್ಲೊ ಆಸೆ ಜೀವಂತವಾಗಿರಿಸಿಕೊಂಡ MI

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2025ರ ಡು ಆರ್​ ಡೈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಅದ್ಭುತ ಪ್ರದರ್ಶನ ತೋರಿ ಗೆಲವು ಸಾಧಿಸಿದೆ. 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ಮತ್ತೊಂದು ಕಪ್ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿಕೊಂಡು, 18ನೇ ಆವೃತ್ತಿ ಐಪಿಎಲ್‌ನಲ್ಲಿ ಕ್ವಾಲಿಫೈಯರ್ -2 ಪ್ರವೇಶಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿ 228 ರನ್​ಗಳಿಸಿದ್ದ MI ಬೌಲಿಂಗ್​​ನಲ್ಲಿ ಗುಜರಾತ್ ಟೈಟನ್ಸ್ (Gujarat Titans) ತಂಡವನ್ನು 208 ಕ್ಕೆ ನಿಯಂತ್ರಿಸುವ ಮೂಲಕ 20 ರನ್​ಗಳಿಂದ ಗೆಲುವು ಸಾಧಿಸಿತು.

229ರನ್​ಗಳ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್​ಗೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್​ನಲ್ಲೇ ನಾಯಕ ಶುಭ್​ಮನ್ ಗಿಲ್​ (1) ಟ್ರೆಂಟ್ ಬೌಲ್ಡ್ ಬೌಲಿಂಗ್​​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ನಂತರ 2ನೇ ವಿಕೆಟ್​ಗೆ ಕುಸಾಲ್ ಮೆಂಡಿಸ್ ಹಾಗೂ ಸಾಯಿ ಸುದರ್ಶನ್ 64 ರನ್​ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು.

ಕುಸಾಲ್ ಮೆಂಡಿಸ್ 10 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಿತ 20 ರನ್​ಗಳಿಸಿ ಸ್ಯಾಂಟ್ನರ್ ಬೌಲಿಂಗ್​​ನಲ್ಲಿ ಹಿಟ್ ವಿಕೆಟ್ ಆದರು. ಈ ಹಂತದಲ್ಲಿ ಒಂದಾದ ಸಾಯಿ ಸುದರ್ಶನ್​ ಜೊತೆಗೂಡಿದ ಮತ್ತೊಮ್ಮ ತಮಿಳುನಾಡು ಸ್ಟಾರ್ ವಾಷಿಂಗ್ಟನ್ ಸುಂದರ್ 3ನೇ ವಿಕೆಟ್​ 44 ಎಸೆತಗಳಲ್ಲಿ 84 ರನ್​ಗಳ ಜೊತೆಯಾಟ ನೀಡಿ ಪಂದ್ಯದಲ್ಲಿ ಗುಜರಾತ್​ ರೇಸ್​ನಲ್ಲಿ ಉಳಿಯುವಂತೆ ಮಾಡಿದರು.

ಮುಂಬೈ ಇಂಡಿಯನ್ಸ್​ಗೆ ರೋಹಿತ್ ಶರ್ಮಾ ಹಾಗೂ ಬೈರ್​ಸ್ಟೋವ್​ ಭರ್ಜರಿ ಆರಂಭ ನೀಡಿದರು. ಈ ಇಬ್ಬರು ಲೆಜೆಂಡರಿ ಬ್ಯಾಟ್ಸ್​ಮನ್​ಗಳು ಪವರ್‌ಪ್ಲೇನಲ್ಲಿ 79 ರನ್ ಸೂರೆಗೈದರು. ರೋಹಿತ್ 33 ರನ್ ಗಳಿಸಿದರೆ, ಜಾನಿ 44 ರನ್ ಗಳಿಸಿದರು.

ಸೂರ್ಯಕುಮಾರ್ ಯಾದವ್ ಕೂಡ ತಮ್ಮ ಅಮೋಘ ಪ್ರದರ್ಶನ ಮುಂದುವರಿಸಿದರು. 2ನೇ ವಿಕೆಟ್​​ಗೆ ರೋಹಿತ್ ಜೊತೆಗೆ ಸೇರಿ 34 ಎಸೆತಗಳಲ್ಲಿ 59 ರನ್​ಗಳ ಜೊತೆಯಾಟ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಸೂರ್ಯಕುಮಾರ್ ಯಾದವ್ 20 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್​ಗಳ ಸಹಿತ 33 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

ಇನ್ನೂ ಕ್ವಾಲಿಫೈಯರ್ 2 ರಲ್ಲಿ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಜೂನ್ 1ರಂದು ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು ಸೋಲು ಕಂಡ ಗುಜರಾತ್ ಟೈಟನ್ಸ್ ಟೂರ್ನಿಯಿಂದ ಹೊರಬಿದ್ದಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!