ಕಿವಿಗಳು ಕೇವಲ ಶಬ್ದಗಳನ್ನು ಕೇಳುವ ಅಂಗವಷ್ಟೇ ಅಲ್ಲ, ಅದು ನಮ್ಮ ಸಮತೋಲನ ಮತ್ತು ಸಂಪರ್ಕದ ಪ್ರಮುಖ ಭಾಗವಾಗಿದೆ. ದೈನಂದಿನ ಜೀವನದಲ್ಲಿ ನಿರಂತರ ಧ್ವನಿ, ಧೂಳು, ನೀರು ಅಥವಾ ಇತರ ವ್ಯತ್ಯಯಗಳಿಂದ ನಮ್ಮ ಕಿವಿಗಳಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚು. ಕಿವಿಯ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುವುದು ಧೀರ್ಘಕಾಲದ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಮಸ್ಯೆಗಳನ್ನು ತಡೆಗಟ್ಟಲು, ಕಿವಿ ಆರೈಕೆ ಅನಿವಾರ್ಯ.
ಉತ್ತಮ ಶ್ರವಣ ಶಕ್ತಿಗಾಗಿ:
ಕಿವಿಗಳ ಸ್ವಚ್ಛತೆ ಮತ್ತು ಆರೈಕೆಯಿಂದ ಶ್ರವಣ ಶಕ್ತಿ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಕಿವಿಯಲ್ಲಿ ಮೇಣ ಅಥವಾ ಕೊಳೆ ಜಮೆಯಾಗಿದ್ದರೆ ಅದು ಶಬ್ದವನ್ನು ಸರಿಯಾಗಿ ಗ್ರಹಿಸಲು ಅಡಚಣೆ ಉಂಟುಮಾಡಬಹುದು.
ಶ್ರವಣ ನಷ್ಟದ ಅಪಾಯ ತಪ್ಪಿಸಲು:
ದೀರ್ಘಾವಧಿಯ ಶಬ್ದ ಪ್ರಭಾವ, ಇನ್‌ಫೆಕ್ಷನ್ ಅಥವಾ ಇನ್ಫೆಕ್ಷನ್ ಗಳಿಂದ ಶ್ರವಣ ಶಕ್ತಿ ಹಾಳಾಗಬಹುದು. ಸರಿಯಾದ ಆರೈಕೆಯಿಲ್ಲದಿದ್ದರೆ ಶ್ರವಣ ಶಕ್ತಿ ಶಾಶ್ವತವಾಗಿ ಕಡಿಮೆಯಾಗಬಹುದು.
ಆಂತರಿಕ ಸಮತೋಲನ ಕಾಪಾಡಲು:
ನಮ್ಮ ದೇಹದ ಸಮತೋಲನದ ಪ್ರಮುಖ ಭಾಗವಾಗಿರುವ ಕಿವಿಯ ಒಳಭಾಗ (inner ear) ಬಾಧಿತವಾದರೆ ತಲೆಸುತ್ತು ಅಥವಾ ಅಸ್ಥಿರತೆಯ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ಕಿವಿ ಆರೋಗ್ಯವು ನಡಿಗೆ ಮತ್ತು ದೈಹಿಕ ಚಟುವಟಿಕೆಗಾಗಿ ಮುಖ್ಯ.
ಸೋಂಕುಗಳನ್ನು ತಡೆಯಲು:
ಅತಿಯಾಗಿ ಕಿವಿಯನ್ನು ಶುದ್ಧಪಡಿಸುವುದು ಅಥವಾ ನೀರನ್ನು ಒಳಗೆ ಹೋಗಲು ಬಿಡುವುದರಿಂದ ಬ್ಯಾಕ್ಟೀರಿಯಲ್ ಅಥವಾ ಫಂಗಲ್ ಇನ್‌ಫೆಕ್ಷನ್ ಉಂಟಾಗಬಹುದು. ಇವುಗಳಿಎ ತಕ್ಷಣದ ಚಿಕಿತ್ಸೆ ನೀಡದಿದ್ದರೆ ದೊಡ್ಡ ಸಮಸ್ಯೆ ಉಂಟಾಗಬಹುದು
ಜೀವನಮಟ್ಟ ಸುಧಾರಣೆಗೆ:
ಒಳ್ಳೆಯ ಶ್ರವಣ ಶಕ್ತಿ ಸಂಭಾಷಣೆ, ಸಾಮಾಜಿಕ ಬದುಕು, ಮತ್ತು ವೃತ್ತಿಪರ ಜೀವನದಲ್ಲಿ ಹೆಚ್ಚಿನ ಯಶಸ್ಸಿಗೆ ಕಾರಣವಾಗಬಹುದು. ಕಿವಿ ಸಮಸ್ಯೆಗಳಿಂದ ಆಗುವ ಅಡಚಣೆಗಳು ಮಾನಸಿಕ ಒತ್ತಡಕ್ಕೂ ಕಾರಣವಾಗಬಹುದು.
ಕಿವಿಗಳ ಆರೈಕೆಯನ್ನು ನಿತ್ಯದ ಸ್ವಚ್ಛತೆ ಭಾಗವಾಗಿಸಿಕೊಳ್ಳುವುದು ಅತ್ಯಂತ ಅಗತ್ಯ. ಶಬ್ದ ಮಾಲಿನ್ಯದಿಂದ ದೂರವಿರುವುದು, ತೀವ್ರ ಶಬ್ದಗಳಲ್ಲಿ ಇಯರ್‌ಪ್ಲಗ್ ಬಳಸುವುದು, ಹಾಗೂ ಕಿವಿಗಳಲ್ಲಿ ಯಾವುದೇ ಕಿರಿಕಿರಿ ಕಂಡುಬಂದರೆ ತಕ್ಷಣ ತಜ್ಞರನ್ನು ಸಂಪರ್ಕಿಸುವುದು ಆರೋಗ್ಯಕರ ಜೀವನದ ಕೀಲಿಕೈ.