ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈಮಾನಿಕ ದಾಳಿಯಿಂದ ತಾಜ್ ಮಹಲ್ ರಕ್ಷಿಸಲು ಡ್ರೋನ್ ವಿರೋಧಿ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ.
ಆಪರೇಷನ್ ಸಿಂಧೂರ್ ನಂತರ ಭಾರತ-ಪಾಕ್ ಮಿಲಿಟರಿ ಮುಖಾಮುಖಿಯಾದ ನಂತರ, ರಾಷ್ಟ್ರೀಯ ಸ್ಮಾರಕಗಳಿಗೆ ಸಂಭಾವ್ಯ ಬೆದರಿಕೆಯನ್ನು ಗುರುತಿಸಿದ ಭದ್ರತಾ ಸಂಸ್ಥೆಗಳು, ಯುದ್ಧದ ಸಮಯದಲ್ಲಿ ಸಂಭವನೀಯ ವೈಮಾನಿಕ ದಾಳಿಯಿಂದ ರಕ್ಷಿಸಲು ಯುನೆಸ್ಕೋ ವಿಶ್ವ ಪರಂಪರೆಯ ತಾಣ, ಆಗ್ರಾದ ತಾಜ್ ಮಹಲ್‌ನಲ್ಲಿ ಡ್ರೋನ್ ವಿರೋಧಿ ತಂತ್ರಜ್ಞಾನ ಅಳವಡಿಸಿವೆ.
ಜಿಲ್ಲಾ ಪೊಲೀಸ್ ಮೂಲಗಳ ಪ್ರಕಾರ, ಈ ವ್ಯವಸ್ಥೆಯು ಎಂಟು ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ ಮತ್ತು ಐತಿಹಾಸಿಕ ಸ್ಮಾರಕದ ಮುಖ್ಯ ಗುಮ್ಮಟದಿಂದ 500 ಮೀಟರ್ ಒಳಗೆ ಬರುವ ಯಾವುದೇ ವೈಮಾನಿಕ ದಾಳಿಯನ್ನು ತಟಸ್ಥಗೊಳಿಸುವ ‘ಸಾಫ್ಟ್ ಕಿಲ್’ ಸಾಮರ್ಥ್ಯ ಹೊಂದಿದೆ.
ಈ ತಿಂಗಳ ಆರಂಭದಲ್ಲಿ ಭಾರತ, ಪಾಕಿಸ್ತಾನದಲ್ಲಿರುವ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿ ನಾಶಪಡಿಸಿತ್ತು. ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಮಿಲಿಟರಿ ಉದ್ವಿಗ್ನತೆ ಹೆಚ್ಚಿದ ನಂತರ ಈ ಬೆಳವಣಿಗೆ ನಡೆದಿದೆ.