ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತ ಮತ್ತು ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಭಾರಿ ಪ್ರಮಾಣದಲ್ಲಿ ಹಿಮಪಾತ ಮತ್ತು ಮಳೆಯಾಗುವ ಮುನ್ಸೂಚನೆ ಹಿನ್ನೆಲೆ ಶನಿವಾರ ಪ್ರಮುಖ ಮಾರ್ಗಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಸ್ಥಳೀಯ ಹವಾಮಾನ ಇಲಾಖೆ ಅಧಿಕಾರಿಗಳು ಭೂಕುಸಿತ, ಹಠಾತ್ ಪ್ರವಾಹ ಮತ್ತು ಬಲವಾದ ಗಾಳಿಯ ಎಚ್ಚರಿಕೆ ಕೂಡ ನೀಡಿದ್ದಾರೆ.
ಭಾರೀ ಹಿಮ ಬೀಳುತ್ತಿರುವುದರಿಂದ ಉತ್ತರ ಕಾಶ್ಮೀರದ ರಜ್ದಾನ್ ಟಾಪ್‌ನ ಪೀರ್-ಕಿ-ಗಲಿ ರಸ್ತೆ, ಗುರೆಜ್-ಬಂಡಿಪೋರಾ ರಸ್ತೆ ಮತ್ತು ಪೂಂಚ್-ರಾಜೌರಿ-ಶೋಪಿಯಾನ್ ರಸ್ತೆಯಲ್ಲಿ ತಾತ್ಕಾಲಿಕವಾಗಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.