ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಸಕ ಮುನಿರತ್ನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಇಂದು ನಡೆಯಿತು.
ಈ ವೇಳೆ ಮುನಿರತ್ನ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.
ಮುನಿರತರನ್ನು ಬಂಧಿಸಲು ಪೊಲೀಸರು ಯತ್ನಿಸುತ್ತಿದ್ದಾರೆ. ಇತರೆ ಆರೋಪಿಗಳಿಗೆ ನೀಡಿರುವ ರಕ್ಷಣೆ ಮುನಿರತ್ನವು ಅನ್ವಯಿಸಬೇಕು ಎಂದು ಮುನಿರತ್ನ ಪರ ವಕೀಲರಿಂದ ಕೋರ್ಟಿಗೆ ಮನವಿ ಮಾಡಲಾಯಿತು. ಮುಂದಿನ ವಿಚಾರಣೆವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್ ಆದೇಶ ಹೊರಡಿಸಿತು. ಬಳಿಕ ಜೂನ್ 2ರಂದು ವಿಚಾರಣೆ ನಿಗದಿಪಡಿಸಿತು.