ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಮಲ್ ಹಾಸನ್ ಕ್ಷಮೆ ಕೇಳೋವರೆಗೂ ಬಿಡೋದಿಲ್ಲ, ಕ್ಷಮೆ ಕೇಳಿಲ್ಲ ಅಂದ್ರೆ ಸಿನಿಮಾ ಬ್ಯಾನ್ ಮಾಡ್ತೇವೆ ಎಂದು ಸಚಿವ ಶಿವರಾಜ್ ತಂಗಡಗಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಕಮಲ್ ಹಾಸನ್ ಕ್ಷಮೆ ಕೇಳಿಲ್ಲ ಅಂದ್ರೆ ಬಿಡೋರು ಯಾರು. ಫಿಲ್ಮ್ ಚೇಂಬರ್ ಅವರ ಜೊತೆ ಮಾತಾಡಿದ್ದೇನೆ. ಕ್ಷಮೆ ಕೇಳದೇ ಹೋದ್ರೆ ಸಿನಿಮಾ ಬಿಡುಗಡೆ ಮಾಡೋಕೆ ಬಿಡೊಲ್ಲ ಎಂದು ಎಚ್ಚರಿಸಿದ್ದೇವೆ, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳಿಗೆ ಕಾನೂನು ತರುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.