ತೆಲಂಗಾಣ ಪೊಲೀಸರ ಮುಂದೆ ಶರಣಾದ ಎಂಟು ನಕ್ಸಲರು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ 8 ಮಂದಿ ಮಾವೋವಾದಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ.

ಮಹಾರಾಷ್ಟ್ರ ಮತ್ತು ಛತ್ತೀಸ್​ಗಢದ ಓರ್ವ ವಿಭಾಗೀಯ ಸಮಿತಿ ಸದಸ್ಯ, ಪ್ರದೇಶ ಸಮಿತಿ ಸದಸ್ಯರಿಬ್ಬರು ಸೇರಿದಂತೆ ಎಂಟು ಮಂದಿ ಮುಲುಗು ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ ಶಬರೀಶ್​ ಪಿ ಮುಂದೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಲುಗು ಜಿಲ್ಲಾ ಪೊಲೀಸರ ಮುಂದೆ 68 ಮಂದಿ ಸೇರಿದಂತೆ ತೆಲಂಗಾಣದಲ್ಲಿ ಈ ವರ್ಷ ಜನವರಿಯಿಂದ 355 ನಕ್ಸಲರು ಶರಣಾಗಿದ್ದಾರೆ.

ಶರಣಾಗತರಾಗಿರುವ ಮವೋಗಳ ಕಲ್ಯಾಣಕ್ಕಾಗಿ ತೆಲಂಗಾಣ ಸರ್ಕಾರದಿಂದ ಅಗತ್ಯ ಕ್ರಮ ಜಾರಿ ಮಾಡಲಾಗುವುದು. ಶರಣಾಗತರು ಕುಟುಂಬದೊಂದಿಗೆ ಶಾಂತಿಯುತ ಜೀವನ ನಡೆಸುವ ಉದ್ದೇಶದಿಂದ ನಕ್ಸಲಿಸಂ ಹಾದಿಯನ್ನು ತೊರೆಯಲು ನಿರ್ಧರಿಸಿ, ಪೊಲೀಸರ ಮುಂದೆ ಬಂದಿದ್ದಾರೆ ಎಂದು ತಿಳಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!