ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2025 ರ ಕ್ವಾಲಿಫೈಯರ್-2 ಪಂದ್ಯ ಆಡಲು ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ರೆಡಿಯಾಗಿದ್ದು, ಈಗಾಗಲೇ ಟಾಸ್ ಕೂಡ ಗೆದ್ದು ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಆದ್ರೆ ಮುಂಬೈ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಅಹಮದಾಬಾದ್ನಲ್ಲಿ ಮಳೆ ಸುರಿಯಲಾರಂಭಿಸಿದೆ. ಆರಂಭದಲ್ಲಿ ತುಂತುರ ಮಳೆ ಸುರಿಯುತ್ತಿತ್ತು. ಆದರೆ ಆ ನಂತರ ಮಳೆ ಧಾರಕಾರವಾಗಿ ಮಳೆ ಸುರಿಯಲಾರಂಭಿಸಿದೆ.ಸದ್ಯಕ್ಕೆ ಮ್ಯಾಚ್ ಸ್ಥಗಿತಗೊಂಡಿದ್ದು, ಹೀಗಾಗಿ ಉಭಯ ತಂಡಗಳಲ್ಲಿ ಆತಂಕ ಮನೆ ಮಾಡಿದೆ.
ಈ ಪಂದ್ಯದ ಗೆಲುವು ತಂಡವನ್ನು ಪ್ರಶಸ್ತಿ ಪಂದ್ಯಕ್ಕೆ ಕೊಂಡೊಯ್ಯಲಿದೆ. ಒಂದೆಡೆ ಪಂಜಾಬ್ ತನ್ನ ಕೊನೆಯ ಪಂದ್ಯವನ್ನು ಸೋತರೆ, ಮತ್ತೊಂಡೆ ಮುಂಬೈ ಎಲಿಮಿನೇಟರ್ ಪಂದ್ಯವನ್ನು ಗೆದ್ದು ಬರುತ್ತಿದೆ.
ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಕ್ವಾಲಿಫೈಯರ್ 2 ಪಂದ್ಯ ರದ್ದಾದ್ರೆ RCBಗೆ ಅದೃಷ್ಟ ಎಂದೇ ಹೇಳಬಹುದು. ಯಾಕಂದ್ರೆ ಇವತ್ತಿನ ಪಂದ್ಯ ರದ್ದಾದ್ರೆ ಐಪಿಎಲ್ ಟೇಬಲ್ ಟಾಪರ್ ಆಗಿರೋ ಪಂಜಾಬ್ ಕಿಂಗ್ಸ್ ನೇರವಾಗಿ ಫೈನಲ್ ತಲುಪಲಿದೆ. ಜೂನ್ 3ರ ಫಿನಾಲೆಯಲ್ಲಿ RCB ವಿರುದ್ಧ ಪಂಜಾಬ್ ಕಿಂಗ್ಸ್ ಸೆಣಸಾಡಲಿದೆ.