ಸಣ್ಣ ಮೀನಿಗೆ ತೃಪ್ತರಾಗಬೇಡಿ ಸೆರೆಗೆ ಬೀಳದ ತಿಮಿಂಗಲಗಳನ್ನ ಟಾರ್ಗೆಟ್ ಮಾಡಿ.. ಹೀಗ್ಯಾಕಂದ್ರು ಸೀತಾರಾಮನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಮಗ್ಲಿಂಗ್ ಜಾಲವನ್ನು ಬುಡಸಮೇತ ಕಿತ್ತುಹಾಕಲು ಹೊರಟಂತಿರುವ ನಿರ್ಮಲಾ ಸೀತಾರಾಮನ್, ಸ್ಮಗ್ಲಿಂಗ್ ಸಿಂಡಿಕೇಟ್​​ಗಳ ಮಾಸ್ಟರ್​​ಮೈಂಡ್​​ಗಳನ್ನು ಪತ್ತೆ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಡಿಆರ್​​ಐ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.

‘ಅಲ್ಲಿ ಇಲ್ಲಿ ಪ್ರಕರಣಗಳನ್ನು ಪತ್ತೆ ಮಾಡುವುದಕ್ಕಷ್ಟೇ ಸೀಮಿತವಾಗದೆ ಇಡೀ ಜಾಲವನ್ನು ಭೇದಿಸುವುದು ಗುರಿಯಾಗಿರಬೇಕು. ಈ ಅಂಶವನ್ನು ನಾನು ಅನೇಕ ಬಾರಿ ಹೇಳಿದ್ದೇನೆ. ನೀವು ಸಣ್ಣ ಮೀನು ಹಿಡಿಯುವುದರಿಂದ ಪ್ರಯೋಜನ ಇಲ್ಲ. ನಮ್ಮ ಗಾಳಕ್ಕೆ ಸಿಗದ ದೊಡ್ಡ ತಿಮಿಂಗಲಗಳೇ ಇವೆ’ ಎಂದು ಡಿಆರ್​​ಐನ ಹೊಸ ಮುಖ್ಯಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಚಿವೆ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!