ಮೇಷ
ಸಂಗಾತಿಯ ಮನದಿಂಗಿತ ಅರಿಯಿರಿ. ಪರಸ್ಪರರು ಅರಿತು ನಡೆದರೆ ಬಹಳಷ್ಟು ಜಗಳ ನಿಲ್ಲುತ್ತವೆ. ವೃತ್ತಿಯಲ್ಲಿ ತೃಪ್ತಿಕರ ವಾತಾವರಣ.
ವೃಷಭ
ವಾಹನ ಚಾಲನೆ ಯಲ್ಲಿ ತುಸು ಎಚ್ಚರ ವಹಿಸಿರಿ. ಮನೆಯಲ್ಲಿ ಭಿನ್ನಮತ ನಿವಾರಣೆಗೆ ಮುಕ್ತ ಮಾತುಕತೆ ಒಳಿತು.ಶೀತ ಸಮಸ್ಯೆ ಕಾಡೀತು.
ಮಿಥುನ
ಮನೆಯವರ ಜತೆ ಭಿನ್ನಮತ ಸಂಭವ. ಮಾತಿಗೆ ಮಾತು ಜಗಳ ತಪ್ಪಿಸದು. ಕೆಲಸದಲ್ಲಿ ತಪ್ಪಾಗದಂತೆ ಎಚ್ಚರ ವಹಿಸಿರಿ. ಧನಹಾನಿ.
ಕಟಕ
ಕೌಟುಂಬಿಕ ಕಲಹ. ಇತರರ ಭಾವನೆಗೂ ಬೆಲೆ ಕೊಡಿ. ನಿಮ್ಮದೇ ನಿಲುವಿಗೆ ಹಠ ಹಿಡಿಯದಿರಿ. ಆರೋಗ್ಯಪೂರ್ಣ ಆಹಾರವಷ್ಟೇ ಸೇವಿಸಿರಿ.
ಸಿಂಹ
ನಿಮ್ಮೊಡನೆ ಮುನಿಸಿಕೊಂಡವರನ್ನು ಒಲಿಸಲು ಆದ್ಯತೆ ಕೊಡಿ. ಕುಟುಂಬದಲ್ಲಿ ಸಣ್ಣ ಜಗಳಕ್ಕೆ ಆಸ್ಪದ ಕೊಡದಿರಿ. ವ್ಯವಹಾರದಲ್ಲಿ ಉನ್ನತಿ.
ಕನ್ಯಾ
ಅಲ್ಪಕಾಲದಲ್ಲಿ ಪ್ರಮುಖ ಕಾರ್ಯ ಮುಗಿಸುವಿರಿ. ಆರ್ಥಿಕ ಪರಿಸ್ಥಿತಿ ಸ್ಥಿರ. ಧಾರ್ಮಿಕ ಸ್ಥಳಕ್ಕೆ ಭೇಟಿ ಸಾಧ್ಯತೆ. ಅಽಕ ಧನವ್ಯಯ.
ತುಲಾ
ಮುಖ್ಯವಿಷಯದಲ್ಲಿ ಕುಟುಂಬಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಅವರನ್ನು ಬಿಟ್ಟು ವ್ಯವಹರಿಸಬೇಡಿ. ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡದಿರಿ.
ವೃಶ್ಚಿಕ
ಜಗಳ, ವಿವಾದ ದಿಂದ ದೂರವಿರಿ. ಹೆಚ್ಚುವರಿ ಕೆಲಸದಿಂದ ಒತ್ತಡ ಹೆಚ್ಚು. ಆರ್ಥಿಕ ಬಿಕ್ಕಟ್ಟು ಕಾಡಬಹುದು. ಕೌಟುಂಬಿಕ ಸಾಮರಸ್ಯ.
ಧನು
ಹಣದ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ಕೊಟ್ಟ ಹಣ ಸುಲಭದಲ್ಲಿ ಹಿಂದೆ ಬರದು. ಆರೋಗ್ಯ ಸಂಬಂಧಿತ ಸಮಸ್ಯೆ ನಿವಾರಣೆ ನಿರಾಳತೆ.
ಮಕರ
ಹಣದ ಹರಿವು ಹೆಚ್ಚಳ. ಅದರೊಂದಿಗೆ ಒತ್ತಡವೂ ಅಧಿಕ. ವ್ಯವಹಾರದಲ್ಲಿ ಮಾತಿನ ಚಕಮಕಿ. ಶಾಂತಚಿತ್ತ ಕಾಯ್ದುಕೊಳ್ಳಿ.
ಕುಂಭ
ಆಸ್ತಿ ಅಥವಾ ವಾಹನ ಖರೀದಿಗೆ ಪೂರಕ ಪರಿಸ್ಥಿತಿ. ಕೆಲವರ ಮಾತನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳದಿರಿ. ವಿವೇಚನೆ ಅತ್ಯವಶ್ಯ.
ಮೀನ
ಸಕಾಲದಲ್ಲಿ ನಿಮ್ಮ ಕಾರ್ಯ ಮುಗಿಯದು. ಕಳೆದು ಹೋದ ಅವಕಾಶಕ್ಕಾಗಿ ಖೇದ ಪಡುವಿರಿ. ಕೌಟುಂಬಿಕ ಶಾಂತಿ, ಸಮಾಧಾನ.