ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲ್ತುಳಿತ ಪ್ರಕರಣಕ್ಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇರ ಹೊಣೆ, ತಕ್ಷಣ ಇವರು ರಾಜೀನಾಮೆ ಕೊಡಬೇಕು ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಮ್ಮ ಹುಚ್ಚುತನಕ್ಕೆ 11 ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಯಾರೇ ಸತ್ತರು ಹತ್ತು ಲಕ್ಷ ಬಿಸಾಕಿ ನಮಗೇನು ಗೊತ್ತಿಲ್ಲ ಅಂತಾ ಸುಮ್ಮನೆ ಇರೋದು, ಜನರ ಉದ್ದಾರಕ್ಕಾಗಿ ಸರ್ಕಾರ ಬಂದಿಲ್ಲ, ಸರ್ವನಾಶಕ್ಕೆ ಬಂದಿದೆ ಎಂದು ಛಲವಾದಿ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.