ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಪಾಣೆಮಂಗಳೂರು ಹಳೆ ಸೇತುವೆ ಕೆಳಭಾಗದಲ್ಲಿ ಬೈಕ್, ಮೊಬೈಲ್, ಶರ್ಟ್ ಮತ್ತು ಚಪ್ಪಲಿ ಬಿಟ್ಟು ಪುತ್ತೂರು ನಗರಸಭೆ ಸದಸ್ಯ ರಮೇಶ್ ರೈ ನಾಪತ್ತೆಯಾಗಿದ್ದ ಪ್ರಕರಣ ದುರಂತ ಅಂತ್ಯ ಕಂಡಿದ್ದು, ಅವರು ಶವವಾಗಿ ಪತ್ತೆಯಾಗಿದ್ದಾರೆ.
ರಮೇಶ್ ರೈ, ಇತ್ತೀಚಿಗೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಇಂದು ಬೆಳಗ್ಗೆ ಸುಮಾರು 11 ಗಂಟೆಯಿಂದ ಅವರ ಬೈಕ್ ಹಾಗೂ ಸೊತ್ತುಗಳು ಪಾಣೆಮಂಗಳೂರು ಹಳೆ ಸೇತುವೆ ಬಳಿ ಅನಾಥವಾಗಿ ಕಂಡು ಬಂದಿತ್ತು.
ಹುಡುಕಾಟ ನಡೆಸಿದಾಗ ನೀರುಪಾಲಾಗಿದ್ದ ರಮೇಶ್ ರೈ ಮೃತದೇಹ ಪುರಸಭೆಯ ನೀರಿನ ಜಾಕ್ವೆಲ್ ಬಳಿ ಪತ್ತೆಯಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.