ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸವೇಶ್ವರ ನಗರದ ಕಲ್ಯಾಣಮಂಟಪವೊಂದರಲ್ಲಿ ಏರ್ ಕೂಲರ್ನಿಂದ ಎಲೆಕ್ಟ್ರಿಕ್ ಶಾಕ್ ಹೊಡೆದು ನಾಲ್ಕು ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ.
ಮೃತ ಮಗುವನ್ನು ಎಂ.ಶಿವಂ (4) ಎಂದು ಗುರುತಿಸಲಾಗಿದೆ. ವೆಸ್ಟ್ ಆಫ್ ಕಾರ್ಡ್ ರೋಡ್ನ ಅಭಿಮಾನಿ ಕನ್ವೆನ್ಷನ್ ಹಾಲ್ನಲ್ಲಿ ಮದುವೆ ರಿಸೆಪ್ಷನ್ ವೇಳೆ ಈ ಘಟನೆ ನಡೆದಿದೆ.
ಶಿವಂ, ಕೆಂಪೆಗೌಡ ನಗರ ನಿವಾಸಿಯಾದ ಪ್ರದೀಪ್ ಮತ್ತು ದೀಪಾ ದಂಪತಿ ಪುತ್ರ ಎಂದು ತಿಳಿದುಬಂದಿದೆ. ಸಂಬಂಧಿಕರ ಮದುವೆಗೆ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಈ ಸಂಬಂಧ ಕಲ್ಯಾಣ ಮಂಟಪದ ಮಾಲೀಕ ದಿವಾಕರ್, ಮ್ಯಾನೇಜರ್, ಎಲೆಕ್ಟ್ರಿಷಿಯನ್ ವಿರುದ್ಧ ದೂರು ದಾಖಲಾಗಿದೆ.