ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ರಫೇಲ್ ಜೆಟ್‌ಗಳ ಬಿಡಿ ಭಾಗಗಳು ಇನ್ಮುಂದೆ ನಮ್ಮ ದೇಶದಲ್ಲೇ ತಯಾರಾಗಲಿವೆ. ಈ ಮಹತ್ವದ ಯೋಜನೆಗಾಗಿ ರಫೇಲ್ ತಯಾರಕ ಕಂಪನಿ ಡಸಾಲ್ಟ್ ಏವಿಯೇಷನ್ ಟಾಟಾ ಗ್ರೂಪ್‌ನೊಂದಿಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.
ಡಸ್ಸಾಲ್ಟ್ ಏವಿಯೇಷನ್ ಮತ್ತು ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್ಸ್ ಲಿಮಿಟೆಡ್ ಭಾರತದಲ್ಲಿ ರಫೇಲ್ ಯುದ್ಧ ವಿಮಾನದ ಫ್ಯೂಸ್‌ಲೇಜ್ ತಯಾರಿಸಲು ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ. ಇನ್ನೂ ಫೈಟರ್ ಜೆಟ್‌ಗಳ ಬಿಡಿಭಾಗಗಳನ್ನು ತಯಾರಿಸಲು ಹೈದರಾಬಾದ್‌ನಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುತ್ತಿದೆ.
ರಫೇಲ್‌ನ ಪ್ರಮುಖ ಬಿಡಿಭಾಗಗಳಾದ ಹಿಂಭಾಗದ ಫ್ಯೂಸ್‌ಲೇಜ್‌ನ ಲ್ಯಾಟರಲ್ ಶೆಲ್‌ಗಳು, ಕೇಂದ್ರ ಫ್ಯೂಸ್‌ಲೇಜ್ ಮತ್ತು ವಿಮಾನದ ಮುಂಭಾಗ ಸೇರಿದಂತೆ ಹಲವಾರು ಪ್ರಮುಖ ಬಿಡಿಭಾಗಗಳು ಹೈದರಾಬಾದ್‌ನಲ್ಲಿಯೇ ತಯಾರಾಗಲಿವೆ.