ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳಿನಿಂದ ಕನ್ನಡ ಬಂದಿದ್ದು ಎನ್ನುವ ಮಾತು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಕಮಲ್ ಹಾಸನ್ ಈಗೋಗೆ ಬಿದ್ದು ಕ್ಷಮಿಸಿ ಎಂದು ಕೇಳಲೇ ಇಲ್ಲ.
ಇತ್ತ ಕನ್ನಡಿಗರು ತಪ್ಪು ಹೇಳಿಕೆ ನೀಡಿದೆ, ಗೊತ್ತಾಗದೇ ಹೇಳಿದ್ದೇನೆ, ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ ಎಂದು ಹೇಳೋಕೆ ಇಷ್ಟೊಂದು ಧಿಮಾಕು ಯಾಕೆ ಎಂದು ಗರಂ ಆಗಿದ್ದಾರೆ.
ಸದ್ಯ ಕಮಲ್ ನಟನೆಯ ಥಗ್‌ಲೈಫ್ ರಿಲೀಸ್ ಆಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಸಿನಿಮಾ ರಿಲೀಸ್ ಆಗೋದಕ್ಕೆ ಬಿಟ್ಟಿಲ್ಲ. ಇದರಿಂದಾಗಿ ಹೆಚ್ಚು ಹಣವನ್ನು ಕಮಲ್ ಕಳೆದುಕೊಂಡಿದ್ದಾರೆ.
ಕಮಲ್ ಮಾತಿಗೆ ಸಿನಿಮಾ ಸಫರ್ ಮಾಡುತ್ತಿದೆ ಎಂದು ನಿರ್ಮಾಪಕರು ಗರಂ ಆಗಿದ್ದಾರೆ.‘ಥಗ್ ಲೈಫ್’ ಚಿತ್ರ ಮೊದಲ ದಿನದ ಕಲೆಕ್ಷನ್ ಕೇವಲ 17 ಕೋಟಿ ರೂಪಾಯಿ. ಈ ಮೊದಲು ರಿಲೀಸ್ ಆಗಿ ಹೀನಾಯ ಸೋಲು ಕಂಡ ‘ಇಂಡಿಯನ್ 2’ ಚಿತ್ರದ ಮೊದಲ ದಿನದ ಗಳಿಕೆಯನ್ನು ಹಿಂದಿಕ್ಕಲು ‘ಥಗ್ ಲೈಫ್’ ಸಿನಿಮಾ ಬಳಿ ಸಾಧ್ಯವಾಗಿಲ್ಲ.