ಹೊಸದಿಗಂತ ವರದಿ ಕಲಬುರಗಿ:
ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ ಹೊರವಲಯದ ಫಿರೋಜಾಬಾದ ಬಳಿ ನಡೆದಿದೆ.
ನಿಜಾಮುದ್ದೀನ್ ಬಾವರಚಿ ಅಲಿಯಾಸ್ ನಜ್ಜು (45) ಕೊಲೆಯಾಗಿರುವ ಯುವಕನಾಗಿದ್ದು,ಹಳೆ ದ್ವೇಷದ ಹಿನ್ನೆಲೆಯಲ್ಲಿ ನಡು ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಕಲಬುರಗಿಯ ಕಿಂಗ್ ಪ್ಯಾಲೆಸ್ ಹಾಲ್ ಹತ್ತಿರದ ನಿವಾಸಿಯಾದ ನಿಜಾಮುದ್ದೀನ್,ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಹೊರ ಬಂದಿದ್ದನು. ಈ ಕುರಿತು ಫರಹತಾಬಾದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.