ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಬಿಹಾರಕ್ಕೆ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ನಳಂದದಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಲಿರುವ ಅವರು, ಗಯಾಜಿ ಜಿಲ್ಲೆಯ ಹಲವಾರು ಮಹಿಳಾ ಗುಂಪುಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ರಾಹುಲ್ ಗಾಂಧಿ ಪ್ರವಾಸದಲ್ಲಿ ಗಯಾಜಿ ಪಟ್ಟಣದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಗೆಹ್ಲೌರ್ನಲ್ಲಿರುವ ದಶರಥ್ ಮಾಂಝಿ ಸ್ಮಾರಕಕ್ಕೂ ಭೇಟಿ ನೀಡಲಿದ್ದಾರೆ. 1960ರಿಂದ ಎರಡು ದಶಕಗಳ ಕಾಲ ಪರ್ವತವನ್ನು ಕಡಿದು ರಸ್ತೆ ನಿರ್ಮಾಣ ಮಾಡಿದ ‘ಪರ್ವತ ಮನುಷ್ಯ’ ಎಂದೇ ಜನಪ್ರಿಯರಾದ ದಶರಥ್ ಮಾಂಝಿ ಕುಟುಂಬ ಸದಸ್ಯರನ್ನು ರಾಹುಲ್ ಭೇಟಿ ಮಾಡಲಿದ್ದಾರೆ.
ನಳಂದದಲ್ಲಿ ರಾಜಗೀರ್ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ‘ಸಂವಿಧಾನ ಸಮ್ಮೇಳನ’ವನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ದೆಹಲಿಗೆ ತೆರಳುವ ಮೊದಲು ಬುದ್ಧನ ಪವಿತ್ರ ಸ್ಥಳವಾದ ಬೋಧ್ ಗಯಾದ ಐತಿಹಾಸಿಕ ಮಹಾಬೋಧಿ ಮಹಾವಿಹಾರ ದೇವಾಲಯಕ್ಕೆ ಅವರು ಭೇಟಿ ನೀಡಲಿದ್ದಾರೆ.